ಇಂಡಿ

ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ : ಮುರುಗೇಂದ್ರ ಶಿವಾಚಾರ್ಯರ

ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ : ಮುರುಗೇಂದ್ರ ಶಿವಾಚಾರ್ಯರ

ಇಂಡಿ: ಸಾಮೂಹಿಕ ವಿವಾಹದಲ್ಲಿ  ವಿವಾಹ ಬಂಧನಕ್ಕೆ ಒಳಗಾದ ವಧು-ವರರು ಪರಸ್ಪರ ಒಬ್ಬರನ್ನೊಬ್ಬರು ಅರಿತು ಆದರ್ಶ ಜೀವನ ಸಾಗಿಸಬೇಕು. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡ ಮದುಮಕ್ಕಳು ಭಾಗ್ಯಶಾಲಿಗಳು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಹೇಳಿದರು. 

ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಗುರು ಅಲ್ಲಮಪ್ರಭು ಹಾಗೂ ಹನುಮಾನ ದೇವರ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. 

ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಎಲ್ಲ ಭಾಗಗಳಲ್ಲಿ ಕಾಲ-ಕಾಲಕ್ಕೆ ಉಚಿತ ಸಾಮೂಹಿಕ ವಿವಾಹ ಏರಿ​‍್ಡಸುವುದು ಅಗತ್ಯ ಎಂದರು. 

ಇಂಡಿಯಾ ಓಂಕಾರ್ ಆಶ್ರಮದ ಡಾ. ಸ್ವರೂಪಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ನಡೆಸುವುದರಿಂದ ಸಮಾಜಕ್ಕೆ ಅಂಟಿಕೊಂಡಿರುವ ಜಾತಿ ತಾರತಮ್ಯ ದೂರ ಮಾಡಿ ಸಮಾನತೆಯ ಬೀಜ ಬಿತ್ತಲು ಸಹಕಾರಿಯಾಗುತ್ತವೆ ಎಂದರು. 

ಆಳೂರದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಪತಿ-ಪತ್ನಿ ತಮ್ಮ ಜೀವನದಲ್ಲಿ  ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸಿ ಸುಖ ಜೀವನ ಸಾಗಿಸಬೇಕು ಎಂದರು. 

ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ, ಮಾಜಿ ಗ್ರಾಂ.ಪಂ, ಅಧ್ಯಕ್ಷ ದಾದಾಸಾಹೇಬ್ ಪವಾರ್, ಅಶೋಕ ಬಳಬಟ್ಟಿ ರಾಜಕುಮಾರ  ಚಾಬುಕ ಸವಾರ, ವಿಠಲ ಪೂಜಾರಿ ಉಮೇಶ ಬಳಬಟ್ಟಿ, ನರಸಿಂಹ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು. ನಾಲ್ಕು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟರು. 

ಧರ್ಮಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. 


ಸುದ್ದಿ ಓದಿ