ಇಂಡಿ

ಸಾಮೂಹಿಕ ವಿವಾಹ ಕಾರ್ಯಕ್ರಮ

ಸಾಮೂಹಿಕ ವಿವಾಹ ಕಾರ್ಯಕ್ರಮ

ಇಂಡಿ: ಪಟ್ಟಣದ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ನಿಮಿತ್ಯ ಡಿ.5 ರಂದು ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಹೇಳಿದರು. 

ವಧುವರರು ವಯಸ್ಸಿನ ದಾಖಲೆ, ವಾಸಸ್ಥಳ ಪ್ರಮಾಣ ಪತ್ರ ಹಾಗೂ ಭಾವಚಿತ್ರದೊಂದಿಗೆ ಡಿ. 4ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. 

ಹೆಚ್ಚಿನ ಮಾಹಿತಿಗಾಗಿ ಕಾಸುಗೌಡ ಬಿರಾದಾರ ಮೊ.8105961310 ಹಾಗೂ ಶಂಕರಗೌಡ ಪಾಟೀಲ ಮೋ.9902745194 ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಅವರು ಹೇಳಿದರು. 


ಸುದ್ದಿ ಓದಿ