ರಾಣೆಬೆನ್ನೂರ

ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಾರಂಭ

ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಾರಂಭ

ರಾಣೆಬೆನ್ನೂರು 23:  ಉಳಿತಾಯ ಕಸ್ಟೇ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದವರು, ಜಾತಿ ಮತ ಬೇಧ ಭಾವವಿಲ್ಲದೆ, ಎಲ್ಲ ರೀತಿಯಲ್ಲಿಯೂ ಧರ್ಮಗಳ ಆಚರಣೆ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎನ್ನುವ ರಾಜ ಮಹರ್ಷಿ ಡಾ : ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಬಹುದೊಡ್ಡದು ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು. ಅವರು ಶುಕ್ರವಾರ ಮುಂಜಾನೆ ಸಿದ್ದೇಶ್ವರ ನಗರದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಂಟಪದಲ್ಲಿ ಎಸ್ ಕೆ ಡಿ ಆರ್ ಪಿ, ಬಿಸಿ ಟ್ರಸ್ಟ್‌, ಪ್ರಗತಿಬಂಧು ಸ್ವಸಹಾಯ ಗುಂಪುಗಳ ಒಕ್ಕೂಟ  ಆಯೋಜಿಸಿದ್ದ, ಮಾರುತಿ ನಗರ ವಲಯದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.  

ಕೇವಲ ಲಕ್ಷ್ಮಿ ಪೂಜೆ ಮಾಡುವುದರಿಂದ ಲಕ್ಷ್ಮಿ ಒಲಿದು ಬರುವುದಿಲ್ಲಾ, ಲಕ್ಷ್ಮಿ ಬರಬೇಕಾದರೆ, ಆರಂಭದಲ್ಲಿ ಸರಸ್ವತಿಯನ್ನು ಒಲಿಸಿಕೊಳ್ಳಬೇಕು,ಅಂದಾಗ ಮಾತ್ರ ಲಕ್ಷ್ಮಿ ತನ್ನಿಂದ ತಾನೇ ಹರಿದು ಬರುವಳು, ಎಂದು ವಿವರಿಸಿ ಮಾತನಾಡಿದ ಶ್ರೀಗಳು, ಮಹಿಳೆಯರು ತಮ್ಮ ಮನೆ ಮಠ ಕುಟುಂಬದ ಜೊತೆಗೆ, ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಿ, ಸಂಸ್ಕಾರವಂತರನ್ನಾಗಿ ಮಾಡಬೇಕು ಇದರಿಂದ ಮಾತ್ರ ಸದಾಕಾಲ ಶಾಂತಿ ನೆಮ್ಮದಿ ಇಂದ  ಬದುಕನ್ನು ಸಾಗಿಸಲು ಸಾಧ್ಯವಾಗುವುದು ಎಂದರು. ಇತಿಹಾಸದಲ್ಲಿ ಈ ದೇಶದ ರಾಜ ಮಹರ್ಷಿಗಳು, ದೇಶವನ್ನು ಆಳಿದ್ದಾರೆ, ಅಂಥವರಿಂದ ಮಾತ್ರ ಸಮಗ್ರ ದೇಶದ ಅಭಿವೃದ್ಧಿ ಸಾಧ್ಯವಾಗುವುದು, ವೀರೇಂದ್ರ ಹೆಗ್ಗಡೆಯವರು ಮಾಡುವಂತಹ ಕೆಲಸ, ಸರಕಾರಗಳಿಂದ ಏಕೆ ಆಗುತ್ತಿಲ್ಲ?  ಎಂದು ಪ್ರಶ್ನಿಸಿದ ಶ್ರೀಗಳು, ರಾಜ್ಯಸಭಾ ಸದಸ್ಯರಾಗಿರುವ ಮಹರ್ಷಿಗಳು  ಭವಿಷ್ಯದ ದಿನಗಳಲ್ಲಿ ಈ ದೇಶವನ್ನು ಮುನ್ನಡೆಸುವ ಮಹತ್ವದ ಕಾರ್ಯದಲ್ಲಿ ಮುಂದಾಗಲಿ ಎಂದು ಆಶಿಸಿದರು.ಮುಖ್ಯ ಅತಿಥಿಗಳಾಗಿದ್ದ, ನಗರಸಭಾ ಸದಸ್ಯ ಶೇಖಪ್ಪ ಹೊಸಗೌಡ್ರ ಅವರು, ಈ ಸಂಘಟನೆಗಳ ಮೂಲಕ, ಆರ್ಥಿಕ ಚೈತನ್ಯ ತುಂಬುವ ಕೆಲಸ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ, ಅವರ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದರು. ನಗರದ ಖ್ಯಾತ ವೈದ್ಯ ಡಾ : ಬಸವರಾಜ ಕೇಲಗಾರ, ಅವರು ಮಹಿಳೆಯರು ಮನಸ್ಸು ಮಾಡಿದರೆ  ಏನನ್ನಾದರೂ ಸಾಧಿಸಬಹುದು. ಸ್ವಾವಲಂಬಿ ಜೀವನ ನಡೆಸಲು ಎಸ್ ಕೆ ಡಿ ಆರ್ ಪಿ, ಯೋಜನೆ ಅತ್ಯಂತ ಸಹಕಾರಿಯಾಗಿದೆ, ಪ್ರಾಮಾಣಿಕವಾಗಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ, ಧರ್ಮದ ತಳಹದಿಯ ಮೇಲೆ  ಆದಾಯ ಗಳಿಸಿ ಆರ್ಥಿಕ ಸಬಲರಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತವಾಗಿದೆ, ಎಂದರು.  

ನಗರಸಭಾ ಅಧ್ಯಕ್ಷ ರೂಪಾ.ರಾ.ಚಿನ್ನಿಕಟ್ಟಿ, ಸ್ವಾ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ರಾಜ್ಯ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮೆ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾರದಾ ಚೋಳಪ್ಪ ಕಸವಾಳ್, ಶ್ರೀಮತಿ ಶಶಿಕಲಾ ಮಂಜುನಾಥ್ ಗೌಡ ಶಿವಣ್ಣನವರ, ನಗರಸಭಾ ಸದಸ್ಯ ಖಾದರ್ ಖಾನ್ ಪಠಾಣ, ಪಾಂಡುರಂಗ ಗಂಗಾವತಿ, ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಪೂಜಾ ವ್ಯವಸ್ಥಾಪನಾ ಸಮಿತಿಯ ಶಕುಂತಲಾ, ಜಬಿವುಲ್ಲಾ, ಕವಿತಾ, ಗೀತಾ, ಶಾಂತಮ್ಮ, ರೂಮಾನಬಿ, ರೇಣುಕಮ್ಮ, ವಿಶಾಲಮ್ಮ  ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಪ್ರಗತಿಬಂಧು ಸಹಾಯ ಗುಂಪುಗಳ ಒಕ್ಕೂಟದ 300ಕ್ಕೂ ಹೆಚ್ಚು ಸುಹಾಸಿನಿಯರು,  ವೇ’ ಶಿವಕುಮಾರ್ ಶಾಸ್ತ್ರಿಗಳು ಹಿರೇಮಠ ಸಾರಥೈದಲ್ಲಿ "ವರಮಹಾಲಕ್ಷ್ಮಿ" ಸಾಮೂಹಿಕ ಪೂಜೆ ನೆರವೇರಿಸಲಾಯಿತು. ಮಂಜುಳಾ ಶಿಕಾರಿಪೂರ್, ಸಂಗಡಿಗರು ಪ್ರಾರ್ಥಿಸಿದರು. ಮೇಲ್ವಿಚಾರಕ ತಿಮ್ಮಪ್ಪ ಸ್ವಾಗತಿಸಿದರು. ಯೋಜನಾಧಿಕಾರಿ ಸತೀಶ್ ಶೆಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಮಂಜುಳಾ ಶಿಕಾರಿಪುರ ನಿರೂಪಿಸಿ, ಬಿ ಲಕ್ಷ್ಮಿ ವಂದಿಸಿದರು. 


ಸುದ್ದಿ ಓದಿ