ಕಾಗವಾಡ

ಮನೆ- ಮನೆಗೆ ಮಾಸ್ಕ್‌, ಸಾನಿಟೈಜರ ವಿತರಣೆ

ಮನೆ- ಮನೆಗೆ ಮಾಸ್ಕ್‌, ಸಾನಿಟೈಜರ ವಿತರಣೆ
ಉಗಾರ ಬಿಕೆ ಗ್ರಾಮದಲ್ಲಿ 10 ಸಾವಿರ ಮಾಸ್ಕ್‌ ಹಾಗೂ ಸಾನಿಟೈಜರ ಮನೆ ಮನೆಗೆ ವಿತರಣೆಗೆ ಗ್ರಾಮ ಪಂಚಾಯತ ಅಧ್ಯಕ್ಷ ಭುಜಗೌಡ ಪ

ಶೇಡಬಾಳ 28:  ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ 10 ಸಾವಿರ ಮಾಸ್ಕ್‌ ಹಾಗೂ ಪ್ರತಿ ಮನೆಗೆ 100 ಎಂ.ಎಲ್ ಸಾನಿಟೈಜರ್ ವತರಿಸಲಾಗುತ್ತಿದೆ ಎಂದು  ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ ಪಾಟೀಲ ಹೇಳಿದರು. 

ಅವರು ಶುಕ್ರವಾರ ದಿ.28 ರಂದು ಉಗಾರ ಗ್ರಾಮ ಪಂಚಾಯತಿಯಲ್ಲಿ ಸಾಂಕೇತಿಕವಾಗಿ ವಿತರಿಸಿ ನಂತರ ಪ್ರತಿ ಗ್ರಾಮ ಪಂಚಾಯತ ವಾರ್ಡ್‌ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಐದು ಜನರ ತಂಡ ರಚಿಸಿ ಪ್ರತಿ ಮನೆ ಮನೆಗೆ ತೆರಳಿ ಮಾಸ್ಕ್‌ ಹಾಗೂ ಸಾನಿಟೈಜರ್ ವಿತರಿಸಲಾಗುತ್ತಿದೆ ಎಂದು ಭುಜಗೌಡ ಪಾಟೀಲ ಹೇಳಿದ ಅವರು ಪ್ರತಿಯೊಬ್ಬ ನಾಗರಿಕರು ಕೆಲಸವಿಲ್ಲದೆ ವಿನಾಕಾರಣ ಮನೆಯಿಂದ ಹೊರಬಂದು ಸೋಂಕಿಗೆ ತುತ್ತಾಗದೆ ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ಕರೆ ನೀಡಿದರು. 

ಗ್ರಾಮದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ಯಾವುದೇ ಅಸಹಜ ಪ್ರಕ್ರಿಯೇಗಳು ನಡೆದರೆ ತಕ್ಷಣವೇ ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಬೇಕೆಂದು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ಹೇಳಿದರು. 

ಈ ವೇಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬು ಐತವಾಡೆ, ಸದಸ್ಯರಾದ ಅಪ್ಪಾಸಾಬ ಚೌಗುಲೆ, ಪ್ರಶಾಂತ ವಸವಾಡೆ, ಜಯಶ್ರೀ ಭೋಸಲೆ, ಗುಣವಂತಿ ಗೊಂಧಳಿ, ಅಪ್ಪಾಸಾಬ ಗುರವ, ರೇಷ್ಮಾ ನೇಜಕರ, ಜ್ಯೋತಿ ಚೌಗುಲೆ, ಅಪ್ಪಾಸಾಬ ಚೌಗುಲೆ, ಸುನಂದಾ ಸನದಿ, ಚಂದ್ರವ್ವಾ ನಾಯಿಕ, ಸಂತೋಷ ಐಹೋಳೆ, ಲತಾ ಶಿಂಧೆ, ಅಬ್ದುಲ್ ಚೌಧರಿ, ಮನೋಜ ಕುಸನಾಳೆ, ಸಂಗಪ್ಪ ಪಡಗನೂರ, ಶ್ವೇತಾ ಕಮತೆ, ಉಜ್ವಲಾ ಚೌಗುಲೆ, ಆಶಾ ಪೂಜಾರಿ, ಭುಜಗೌಡ ಪಾಟೀಲ, ಶಬಶಾದಭಿ ಪಠಾಣ, ಉದಯ ಕಾಂಬಳೆ, ಶೋಭಾ ಶಿಂಧೆ, ಅಮೀನಸಾಬ ಜಾತಗಾರ, ಜಯಪಾಲ ಸಾಂಗವಾಡೆ, ಬಾಹುಸಾಹೇಬ ಮಹಾಡಿಕ, ಅಂಜನಾದೇವಿ ಆಳಪ್ಪನವರ, ಕುಮಾರ ಕಾಂಬಳೆ ಇದ್ದರು. 

ಈ ವೇಳೆ ವೃಷಭಗೌಡ ಪಾಟೀಲ, ಅಪ್ಪಾಸಾಬ ಚೌಗುಲೆ,  ವೃಷಭಗೌಡ ಪಾಟೀಲ,ವಿನಾಯಕ ಶಿಂಧೆ, ವಿಜಯ ಶಿಂಧೆ, ರಾವಸಾಬ ಗಿಡ್ಡಸಕ್ಕನವರ, ಸುರೇಶ ವಸವಾಡೆ, ಪ್ರಮೋದ ಹೊಸುರೆ, ಬಾಳಾಸಾಬ ಹವಲೆ, ಅಪ್ಪಾಸಾಬ ಸನದಿ, ರಮೇಶ ಖಂಡೇರಾಜುರೆ,ಸಾಗರ ಪೂಜಾರಿ ಸೇರಿದಂತೆ ಮುಖಂಡರು ಮನೆ ಮನೆಗೆ ಮಾಸ್ಕ್‌ ವಿತರಿಸಿದರು. 

ಸುದ್ದಿ ಓದಿ