ಕಾಗವಾಡ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ
ಕಾಗವಾಡ ತಾಲ್ಲೂಕಿನ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಸಕ್ಕರೆ ಕಾರ

ಕಾಗವಾಡ 16: ಸೋಮವಾರ ದಿ. 19 ಹಾಗೂ ದಿ. 22 ರಂದು ಜರುಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಗವಾಡ ತಾಲೂಕಿನ 9 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರಿಂದ 2700 ಮಾಸ್ಕ್‌ ಹಾಗೂ 25 ಲೀಟರ್ ಸ್ಯಾನಿಟೈಸರ್ ನೀಡಲಾಯಿತು. 

ದಿ. 16ರಂದು ಸಚಿವ ಶ್ರೀಮಂತ ಪಾಟೀಲರ ಕೆಂಪವಾಡದ ಕಚೇರಿಯಲ್ಲಿ ಅವರ ಸುಪುತ್ರರು ಹಾಗೂ ಅಥಣಿ ಸಕ್ಕರೆ ಕಾರ್ಖಾನೆಯ ಕಾರ್ಯಕಾರಿ ಸಂಚಾಲಕ ಸುಶಾಂತ ಪಾಟೀಲ ಇವರಿಂದ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು. 

ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲಪ್ಪಾ ಮುಂಜೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಸ್ವೀಕರಿಸಿ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದ ಸೂಚಿಸಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡುವಾಗ, ತಾಲೂಕಿನಲ್ಲಿ 9 ಕೇಂದ್ರಗಳಲ್ಲಿ ಒಟ್ಟು 2301 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಇದರಲ್ಲಿ 1320 ವಿದ್ಯಾರ್ಥಿ ಹಾಗೂ 981 ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆಯೆಂದರು. 

ಪರೀಕ್ಷೆ ಯಶಸ್ವಿಗೊಳಿಸಲು 442 ಸಿಬ್ಬಂದಿದವರು ಕಾರ್ಯನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಆರೋಗ್ಯ ತಪಾಸಣೆ ಕೌಂಟರ್ ಮಾಡಲಾಗಿದೆ. 

ಅವರೊಂದಿಗೆ ನೋಡಲ ಅಧಿಕಾರಿಗಳಾದ ಎಸ್‌.ಬಿ.ಪಾಟೀಲ, ಸಿ.ಎಸ್‌.ಕುಂಬಾರ, ಗಣ್ಯರಾದ ರಾಜು ಚವ್ಹಾಣ, ವಿನಾಯಕ ಪಾಟೀಲ, ದೀಪಕ ಪಾಟೀಲ, ಕಲಗೌಡ ಪಾಟೀಲ, ಆಪ್ತ ಸಹಾಯಕ ವಿನಾಯಕ ಶಿಂಧೆ, ಮತ್ತಿತರರು ಉಪಸ್ಥಿತರಿದ್ದರು. 

ಸುದ್ದಿ ಓದಿ