ಧಾರವಾಡ - ಹುಬ್ಬಳ್ಳಿ

ಸಿಂಧೂರ ಲಕ್ಷ್ಮಣರವರ ಹುತಾತ್ಮ ದಿನಾಚರಣೆ

ಸಿಂಧೂರ ಲಕ್ಷ್ಮಣರವರ ಹುತಾತ್ಮ ದಿನಾಚರಣೆ

ಧಾರವಾಡ 15 : ದಿ.15ರಂದು ಕ್ರಾಂತೀವೀರ ಸಿಂಧೂರ ಲಕ್ಷ್ಮಣರವರ ಹುತಾತ್ಮ ದಿನಾಚರಣೆ ಅಂಗವಾಗಿ ಗೋಕುಲ್ ರೋಡ, ರಾಮಲಿಂಗೇಶ್ವರನಗರ ಕ್ರಾಸ್ ಹುಬ್ಬಳ್ಳಿಯಲ್ಲಿ ಇರುವ ಪ್ರತಿಮೆಗೆ ಮುಂಜಾನೆ 10-30 ಗಂಟೆಗೆ ರಾಮಪ್ಪ ಕೃಷ್ಣಪ್ಪ ಬಡಿಗೇರ, ಪೂಜ್ಯ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರಿಂದ ಮಾಲಾರೆ​‍್ಣ ಕಾರ್ಯಕ್ರಮ ಏರಿ​‍್ಡಸಲಾಗಿತ್ತು. ಸದರಿ ಮಾಲಾರೆ​‍್ಣ ಕಾರ್ಯಕ್ರಮದಲ್ಲಿ ದುರ್ಗಮ್ಮ ಬೀಜವಾಡ, ಮಾನ್ಯ ಉಪ ಮಹಾಪೌರರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಡಾ. ಈಶ್ವರ ಉಳ್ಳಾಗಡ್ಡಿ, ಆಯುಕ್ತರು, ಹು-ಧಾ.ಮ ಪಾಲಿಕೆ ಹುಬ್ಬಳ್ಳಿ, ಗೀರೀಶ ತಳವಾರ, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಸಹಾಯಕ ಆಯುಕ್ತರು, ವ.ಕ.ನಂ:07, ಚಂದ್ರಶೇಖರಗೌಡ ಮಾಲಿಪಾಟೀಲ ಕ್ರಾಂತೀವೀರ ಸಿಂಧೂರ ಲಕ್ಷ್ಮಣರವರ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು,  ಹಾಗೂ ಸಾರ್ವಜನಿಕರು, ಅಧಿಕಾರಿ/ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 


ಸುದ್ದಿ ಓದಿ