ಮಾಕಂರ್ಡೇಶ್ವರ ಸ್ವಾಮಿ ಜಯಂತಿ ಆಚರಣೆ
ರಾಣಿಬೆನ್ನೂರ 21: ಇಲ್ಲಿನ ಸಿದ್ದೇಶ್ವರ ನಗರದ ಶ್ರೀಗುರು ಮಾಕಂರ್ಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರ ಸ್ವಾಮಿಯ ಜಯಂತಿ ಅಂಗವಾಗಿ ಸೋಮವಾರ ಶ್ರೀಬಾಲ ಮಾಕಂರ್ಡೇಶ್ವರ ಸ್ವಾಮಿಯ ನಾಮಕರಣ ಹಾಗೂ ತೊಟ್ಟಿಲೋತ್ಸವ ಭಕ್ತಿ ಪೂರ್ಣವಾಗಿ ವೆರವೇರಿತು.
ತಾಲೂಕಿಲ ತುಮ್ಮಿನಕಟ್ಟಿಯ ಪದ್ಮಸಾಲಿ ಗುರು ಪೀಠದ ಪೀಠಾಧಿಪತಿ ಪ್ರಭುಲಿಂಗ ಮಹಾಸ್ವಾಮಿಜಿಗಳ ದಿವ್ಯಸಾನಧ್ಯದಲ್ಲಿ ತೊಟ್ಟಿಲೋತ್ಸವ ನಡೆಯಿತು. ಶ್ರೀಬಾಲ ಮಾಕಂರ್ಡೇಶ್ವರ ಸ್ವಾಮಿಯ ತೊಟ್ಟಿಲೋತ್ಸವದಲ್ಲಿ ಮಹಿಳೆಯರು ಜೋಗುಳ ಹಾಡುವ ಮೂಲಕ ನಾಮಕರಣ ಮಾಡಿದರು.
ಅಂದು ಬೆಳಗ್ಗೆ ಬ್ರಹ್ಮಿಮುಹರ್ತದಲ್ಲಿ ಶ್ರೀ ಮಾಕಂರ್ಡೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ ಹಾಗೂ ವಿವಿಧ ಹೂವುಗಳಿಂದ ಅಲಂಕಾರ ಪೂಜೆ ನೆರವೇರಿತು.
ದೇವಸ್ಥಣ ಸಮಿತಿ ಅಧ್ಯಕ್ಷ ನಾಗರಾಜಅ ಅಗಡಿ, ಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಲಕ್ಷಣ ಕಡ್ಲಿಬಾಳ, ಪರಶುರಾಮ ಅಗಡಿ, ನಾಗರಾಜ ದೇವರಡ್ದಿ, ಕೆ.ಕೆ. ಹಳ್ಳಳ್ಳಿ, ಶಂಕ್ರಣ್ಣ ಗರಡಿಮನಿ, ರೇವಣಪ್ಪ ಗೂತ್ತುರು, ಪ್ರವೀಣ ಗುತ್ತುರು, ಮಾರುತಿ ಗರಡಿಮನಿ, ಚನ್ನಬಸಮ್ಮ ಕಾಮಣ್ಣನವರ, ದ್ರಾಕ್ಷಯಣಿ ಮುಕ್ತೇನಹಳ್ಳಿ, ಕವಿತಾ ಶೆಟ್ಟಿ, ಶಶಿಕಲಾ ಬಂಡೇಕಲ, ಪ್ರೇಮಾ ಶೆಟ್ಟಿ, ರುದ್ರಮ್ಮ ಸೇರಿದಂತೆ ಮತ್ತಿತರರು ಇದ್ದರು.