ಕಾಲು ಮುರಿದುಕೊಂಡ ರೈತನ ಆರೋಗ್ಯ ವಿಚಾರಿಸಿದ ಮಣ್ಣಣ್ಣವರ
ಶಿಗ್ಗಾವಿ 21: ತಾಲೂಕಿನ ಹಿರೇಮಲ್ಲೂರ ಗ್ರಾಮದ ರೈತ ಮೌಲಾಲಿ ಜಾನುವಾರುಗಳಿಗೆ ಹೊಟ್ಟು ತರಲು ಹೋದಾಗ ಹೊಟ್ಟಿನ ಬಣವೆ ಮುಗುಚಿಕೊಂಡು ಮೈಮೇಲೆ ಬಿದ್ದು ಕಾಲನ್ನು ಮುರಿದುಕೊಂಡದ್ದನ್ನು ತಿಳಿದುಭೇಟಿ ಮಾಡಿ ಧೈರ್ಯ ತುಂಬಿ ಆರೋಗ್ಯ ವಿಚಾರಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರಿದ್ದಾರೆ ಯಾವುದೇ ರೀತಿಯಲ್ಲಿ ಅಂಜಬೇಡಿ ನಿಮಗೆ ಸೂಕ್ತ ಚಿಕಿತ್ಸೆ ಕೊಡುತ್ತಾರೆ ಎಂದು ಧೈರ್ಯ ತುಂಬಿ ವೈದ್ಯಾಧಿಕಾರಿಗಳಿಗೂ ಮಾತನಾಡಿ ಸೂಕ್ತ ಚಿಕಿತ್ಸೆ ಕೊಡುವಂತೆ ಮನವಿ ಮಾಡಿಕೊಳ್ಳಲಾಗಿ ಸೂಕ್ತ ಚಿಕಿತ್ಸೆ ಕೊಡುವುದಾಗಿ ಹೇಳಿದ ವೈದ್ಯಾಧಿಕಾರಿಗಳ ಬಗ್ಗೆ ತಿಳಿಸಿದರು.
ಅಲ್ಲದೇ ಸರ್ಕಾರದಿಂದ ಅನುಕೂಲವಾಗುವಪರಿಹಾರ ರೈತನಿಗೆ ಕೊಡುವಂತೆ ಮಂಜುನಾಥ ಮಣ್ಣಣ್ಣವರ ತಹಶೀಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಯೂಸಫ್ ದೊಡ್ಮನಿ, ಬನ್ನೂರ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಕಾದರ ಗೌಸ್ ಮುಕ್ಕುಬಾಯಿ, ಹಾಗೂ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಪೀರ್ ಸಾಬ್ ನದಾಫ್ ಇನ್ನು ಹಲವರು ಉಪಸ್ಥಿತರಿದ್ದರು.