ದೈವಿಶಕ್ತಿಯ ಪ್ರಭಾವದ ಮುಂದೆ ಮಾನವಕುಲ ಕ್ಷಣಿಕ : ಅತ್ತಿಗೇರಿ
ಶಿಗ್ಗಾವಿ :ಇಂದಿನ ಕಲಿಯುಗದಲ್ಲಿ ಮನುಕುಲ ನೂರಾರು ಸಾಧನೆಗಳೊಂದಿಗೆ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಮಾನವನ ಎಲ್ಲ ಶಕ್ತಿಯನ್ನು ಮೀರಿಸುವಂತಹ ಅದ್ಭುತವಾದದ್ದು ದೈವಿಶಕ್ತಿ, ದೈವಿಶಕ್ತಿಯ ಪ್ರಭಾವ ಮತ್ತು ಪವಾಡದ ಮುಂದೆ ಮಾನವಕುಲ ಕ್ಷಣಿಕ ಮಾತ್ರ ಎಂದು ಕನ್ನಡ ಪ್ರಾಧ್ಯಾಪಕಿ ಡಾ. ಸುಮಂಗಲಾ ಅತ್ತಿಗೇರಿ ಹೇಳಿದರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದಎರಡನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ದೇವಿ ಆರಾಧನೆ ಕುರಿತು ಉಪನ್ಯಾಸ ನೀಡಿದ ಅವರು ನಮ್ಮ ದಿನನಿತ್ಯದ ಒತ್ತಡದ ಬದುಕಿನಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಭಕ್ತಿ ಭಾವದಿಂದದೇವಿ ಆರಾಧನೆ, ದೈವ ಶಕ್ತಿಯ ಮೊರೆ ಹೋದರೆ ಮನುಷ್ಯ ಸಂಸ್ಕಾರಯುತ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಯಾವಜಾತಿ ಭೇದ ಭಾವವಿಲ್ಲದೆ ನಡೆಯುವಂತಹ ಇಂತಹ ದೇವಿ ಜಾತ್ರೆಗಳು ಸಾಮರಸ್ಯದ ಪ್ರತೀಕವಿದ್ದಂತೆ, ಎಲ್ಲರೂಒಂದುಗೂಡಿದೇವಿಯ ಕೃಪೆಗೆ ಪಾತ್ರರಾಗೋಣಎಂದರು.
ನರಸೀಪುರದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ಪಂಡರಾಪುರದ ಹ.ಬ.ಪ. ಪ್ರಭಾಕರ್ ಬೊದಲೆ ಮಹಾರಾಜರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಸುಜನಿ ನಾಟ್ಯಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯರೂಪಕ, ಸಂಸ್ಕೃತಿ ಶಾಲೆ, ಉನ್ನತಿಕಾನ್ವೆಂಟ್ ಶಾಲೆ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಂಬಯ್ಯ ಹಿರೇಮಠಕಲಾತಂಡದಿಂದ ಜನಪದ ಗೀತೆಗಳನ್ನು ನಡೆಸಿಕೊಡಲಾಹಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಸಯ್ಯದ್‌ಅಜ್ಜಂಪಿರ್‌ಖಾದ್ರಿ ಮಾತನಾಡಿದರು.
ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಶಿವಪ್ಪ ಚಿನ್ನಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಕೊಟ್ರೇಶ್ ಮಾಸ್ಟರ ಬೆಳಗಲಿ, ಪರಸಪ್ಪ ಸತ್ಯಪ್ಪನವರ, ಅಶೋಕ ಕುರ್ಸಾಪುರ, ಸುರೇಶ ಮೂಳೆ, ಸೋಮಪ್ಪ ಮರಿದ್ಯಾಮಣ್ಣವರ, ಶ್ರೀನಿವಾಸ್‌ದೇಶಪಾಂಡೆ, ನಿಂಗಪ್ಪಕುನ್ನೂರ, ಸಚಿನ ಮಡಿವಾಳರ, ಹನುಮಂತಪ್ಪ ದ್ಯಾಮಣ್ಣನವರ, ಅರುಣ ಹುಡೆದಗೌಡ್ರ, ಮುತ್ತಣ್ಣ ಎಲಿಗಾರ, ವೀರೇಶ ಹೊಂಡನಕಟ್ಟಿ, ಕೇದಾರ್ಪ ಬಗಾಡೆ, ಸೋಮಪ್ಪ ಗುಂಜಳ್ಳ, ವಿಶ್ವನಾಥ ಗಾಣಿಗರ, ಕಲ್ಲಪ್ಪ ಮೆಳ್ಳಳ್ಳಿ ಸೇರಿದಂತೆ ಅನೇಕರಿದ್ದರು.