ರಾಣೆಬೆನ್ನೂರ

ಮಂಜುನಾಥ ಹೊರಕೇರಿ, ಪರಶುರಾಮ ವಿಠ್ಠಪ್ಪ ಕಲಿವಾಳ ಇವರಿಗೆ ಸನ್ಮಾನ

ಮಂಜುನಾಥ ಹೊರಕೇರಿ, ಪರಶುರಾಮ ವಿಠ್ಠಪ್ಪ ಕಲಿವಾಳ ಇವರಿಗೆ ಸನ್ಮಾನ

ರಾಣಿಬೆನ್ನೂರು,22: ತಾಲೂಕಿನ ಮಾಕನೂರ ಗ್ರಾಮದ ನಿವಾಸಿಗಳಾದ ದಾವಣಗೇರಿ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಮಂಜುನಾಥ ಹೊರಕೇರಿ ಮತ್ತು ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪರಶುರಾಮ ವಿಠ್ಠಪ್ಪ ಕಲಿವಾಳ ಇವರನ್ನು ಗೆಳೆಯರ ಬಳಗದ ವತಿಯಿಂದ ಗ್ರಾಮದ  ಆಂಜನೇಯ ದೇವಸ್ಥನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  

ಮಂಜುನಾಥ ಹೊರಕೇರಿ ಇವರು ದಾವಣಗೇರಿ ಜಿಲ್ಲೆಯಲ್ಲಿ 38 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊದಿರುವ ಹಾಗೂ ಪರಶುರಾಮ ವಿಠ್ಠಪ್ಪ ಕಲಿವಾಳ ಇವರು ಗೋವಾದಲ್ಲಿ ಇಂಜೀನೀಚಿುರಾಗಿ ಸೇವೆ ಸಲ್ಲಿಸುತ್ತಿರುವುದರ ಜೊತೆಗೆ ಕನ್ನಡದ ಉಳುವಿಗಾಗಿ ಕನ್ನಡ ಪರ ಸಂಘಟನೆಗಳ ಮೂಲಕ ಶ್ರಮಿಸುತ್ತಿರುವುದನ್ನು ಗುರುತಿಸಿ ಸ್ನೇಹ ಯುವ ಸಾಂಸ್ಕೃತಿಕ ಸಂಘ (ರಿ) ಬೆಂಗಳೂರ ಮತ್ತು ಭಾರತೀಯ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ನವದೇಹಲಿ ಇವರ ವತಿಯಿಂದ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ಪುರಸ್ಕರಿಸಿದ ಹಿನ್ನಲೆಯಲ್ಲಿ ಇವರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ಈ ವೇಳೆ ಗ್ರಾಪಂ ಸದಸ್ಯ ಡಾಽ ಮಹಾಂತೇಶ ಹುಚ್ಚಣ್ಣನವರ ಮಾತನಾಡಿ. ನಮ್ಮ ಗ್ರಾಮದ ಸುಪುತ್ರರಾದ   ಮಂಜುನಾಥ ಹೊರಕೇರಿ ಮತ್ತು ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪರಶುರಾಮ ವಿಠ್ಠಪ್ಪ ಕಲಿವಾಳ ಇವರು ಮಾಕನೂರ ಗ್ರಾಮದ ಹೆಸರನ್ನು ರಾಜ್ಯ ಮತ್ತು ಅಂತರ ರಾಜ್ಯದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಮುಂದೆಯೂ ಇವರ ಸೇವೆ ಸಮಾಜ ಮುಖಿಯಾಗಿರಲಿ ಎಂದು ಹಾರೈಸುತ್ತವೆ ಎಂದರು.  

ಗ್ರಾಪಂ ಸದಸ್ಯರಾದ ದೇವೇಂದ್ರ​‍್ಪ ಯಲಜಿ, ಕೆಂಚನಗೌಡ ಮುದಿಗೌಡ್ರ, ಶಾರದಾ ಕಲಿವಾಳ, ಚಂದ್ರಗೌಡ ಮುದಿಗೌಡರ, ನಾಗನಗೌಡ ಭರಮಗೌಡ್ರ, ಈರಣ್ಣ ಹಲಗೇರಿ, ಮಹಾಂತೇಶ ಆನಂದಿ, ಮಂಜುನಾಥ ಕುಂಬಳೂರ, ಕೊಟ್ಟರ​‍್ಪ ಐರಣಿ, ಬಸಪ್ಪ ಯಲಜಿ, ಸಿದ್ಧಾರೂಢ ಕುಂಬಳೂರ, ಮಂಜುನಾಥ ಆನಂದಿ, ರಮೇಶ ಐರಣಿ, ಬಸವರಾಜ ಹೊರಕೇರಿ, ಧರ್ಮನಗೌಡ ಮುದಿಗೌಡ್ರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು. 


ಸುದ್ದಿ ಓದಿ