ಶಿಗ್ಗಾವ್

ನೊಂದವರ ಧ್ವನಿ ಆಗಿರುವ ಮಂಜುನಾಥ ಮಣ್ಣಣ್ಣವರ : ಹಾದಿಮನಿ

ನೊಂದವರ ಧ್ವನಿ ಆಗಿರುವ ಮಂಜುನಾಥ ಮಣ್ಣಣ್ಣವರ : ಹಾದಿಮನಿ

ಶಿಗ್ಗಾವಿ 11: ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿರುವ ನೊಂದವರಧ್ವನಿ ಆಗಿರುವ  ಮಂಜಣ್ಣ ನಮ್ಮ ಸಿಬ್ಬಂದಿಗಳು ಆಕಸ್ಮಿಕ ಅಪಘಾತಗಳಿಗೆ ಒಳಗಾದಾಗ ಮೊದಲು ಆಸ್ಪತ್ರೆಗಳಿಗೆ ಬಂದು ಅವರ ಕಾಳಜಿ ಮಾಡುತ್ತಾರೆ, ಮಂಜಣ್ಣ ಗುತ್ತಿಗೆದಾರರ ಸಂಘ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಿದೆ ಎಂದು ನೌಕರರ ಸಂಘದ ಕಾರ್ಯದರ್ಶಿ ಶಿವಾನಂದ ಹಾದಿಮನಿ ಹೇಳಿದರು. 

ಪಟ್ಟಣದ ತಾಲೂಕ ಅನುಮತಿ ಪಡೆದ ವಿದ್ಯುತಗುತ್ತಿಗೆದಾರ ಸಂಘದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಇವರ ಜನಪರ ಕಾಳಜಿ ಗುತ್ತಿಗೆದಾರರ ಪ್ರೀತಿ ಅಭಿಮಾನವೇ ಅವರನ್ನು ತಾಲೂಕಿನಿಂದ ರಾಜ್ಯಮಟ್ಟಕ್ಕೆ ಗುತ್ತಿಗೆದಾರರ ಸಂಘಕ್ಕೆ ಆಯ್ಕೆ ಮಾಡಲು ಕಾರಣವಾಯಿತು ಅವರ ಅಧಿಕಾರ ಅವಧಿಯಲ್ಲಿ ಗುತ್ತಿಗೆದಾರರನ್ನು ಒಗ್ಗಟ್ಟು ಮಾಡಿ ನೌಕರ ಬಾಂಧವರನ್ನು ಒಗ್ಗೂಡಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಜಿಲ್ಲಾ ಸಂಘಕ್ಕೆ ಗುತ್ತಿಗೆದಾರರ ಸ್ವಂತಕಟ್ಟಡಕಟ್ಟಿ ಅಜರಾಮರ ಕೆಲಸ ಮಾಡಿದ್ದಾರೆ ತಾಲೂಕಿನಲ್ಲಿಯೂ ನಿವೇಶನ ಖರೀದಿ ಮಾಡಿದ್ದು ಆದಷ್ಟು ಬೇಗನೆ ಕಟ್ಟಡ ಪೂರ್ಣವಾಗಲಿ ಎಂದು ಆಶಿಸುತ್ತೇನೆ ಇಂತಹ ನಿಸ್ವಾರ್ಥ ಸೇವೆಗೆ ಇಂದು ಸರ್ಕಾರ ಪುರಸಭೆ ನಾಮ ನಿರ್ದೇಶನ ಮಾಡಿರೋದು ಸಂತಸತಂದಿದೆ.ಮುಂದಿನ ಸಾಮಾಜಿಕ ಹಾಗೂ ರಾಜಕೀಯ ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ ಮಣ್ಣಣ್ಣವರ ಹುದ್ದೆಗಳು ಹುಡುಕಿಕೊಂಡು ಬಂದಾಗ ಅದಕ್ಕೆ ಹೆಚ್ಚು ಗೌರವ  ಹುಡುಕಿಕೊಂಡು ಹೋಗುವ ಗೌರವಕ್ಕಿಂತ ಹೆಚ್ಚು ಮಾನ್ಯತೆ ಇರುತ್ತದೆ. ಸಂಘ ಯಾವತ್ತೂ ನನಗೆ ಬೆಂಗಾವಲು ಆಗಿ ಇದೆ ಸಂಘದ  ನೌಕರರ ಸಹಕಾರದಿಂದ  ಋಣ ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ ಹಾಗೂ ಹಿಂದಿನ ಯುವ ಪೀಳಿಗೆಗಳು ಗಮನಿಸಿ ಕಾರ್ಯ ಮಾಡಬೇಕು ಸಾರ್ವಜನಿಕವಾಗಿ ಅಲ್ಪಸ್ವಲ್ಪ ಸೇವೆ ಮಾಡಬೇಕು  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳಾದ ಬಸವರಾಜ ಬಂಡಿವಡ್ಡರ, ಡಿ ಎಚ್ ಮಾಲ್ತೇಶ್ ನೌಕರರಾದ ನಿಂಗಪ್ಪ ಹೂಗಾರ್,ಅಜ್ಜಣ್ಣವರ, ಸರೋಜಾ ನಿಂಗಣ್ಣ ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗಭೂಷಣ್ ಹಿರೇಮಠ, ಉಪಾಧ್ಯಕ್ಷ ಅಬ್ದುಲ್ ಹರಪನಹಳ್ಳಿ, ಸದಸ್ಯ ರಾದಚಂದ್ರ ಶೇಖರ್‌ಕೋಪಡೇ, ನವೀನ್ ಇಂಗಳಗಿ, ಮುಲ್ಲಾ, ಗುಂಡಪ್ಪ ಶರಣಪ್ಪ ದೇಸಾಯಿ ಕೇಟಿ ಪಾಟೀಲ್ ಹಿರೇಮಠ, ಶಿವರಾಜ್ ಮಲ್ಲಪ್ಪ ಹೊನ್ನಳ್ಳಿ ಅಬ್ದುಲ್ ಈರಣ್ಣ ಎಲಿಗಾರ, ಅದಂಬಾಯಿ ಇನ್ನು ಹಲವಾರು ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ