ವಿದುಷಿ ಸುಜಾತಾ ಗುರವರಿಗೆ ಮಾಣಿಕ್ ವರ್ಮ ಪ್ರಶಸ್ತಿ
ಧಾರವಾಡ 26: ಪುಣೆಯ ಭಾರತ ಗಾಯನ ಸಮಾಜವು 2024ನೇ ಸಾಲಿನ ಪದ್ಮಶ್ರೀ ಮಾಣಿಕ್ ವರ್ಮ ಪ್ರಶಸ್ತಿಯನ್ನು ಧಾರವಾಡದ ವಿದುಷಿ ಸುಜಾತಾ ಗುರವ ಅವರಿಗೆ ನೀಡಿದೆ. ಪ್ರಶಸ್ತಿ ರೂ.10,000-00 ನಗದು ಹಾಗೂ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಅಕ್ಟೋಬರ್ 19 ರಂದು ಪುಣೆಯ ಗಾಯನ ಸಮಾಜ ಸಭಾಂಗಣದಲ್ಲಿ ದೇವಗಂಧರ್ವ ಪಂ.ಭಾಸ್ಕರಬುವಾ ಬಖಾಲೆ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಕ್ರಿಯ ಸದಸ್ಯರಾಗಿರುವ ವಿದುಷಿ ಸುಜಾತಾ ಗುರವ ಅವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಹಾಗೂ ಸಂಯೋಜಕ ಪ್ರಕಾಶ ಬಾಳಿಕಾಯಿ ಅಭಿನಂದಿಸಿದ್ದಾರೆ.