ವಾಹನ ಡಿಕ್ಕಿ: ವ್ಯಕ್ತಿ ಸಾವು
ರಾಣಿಬೆನ್ನೂರ 24: ಅಪರಿಚಿತ ವಾಹನಯೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಮದೋಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಅಂಡರ್ ಬ್ರಿಡ್ಜ್‌ನಲ್ಲಿ ನಡೆದಿದೆ.
ಹಾನಗಲ ತಾಲೂಕಿನ ಕಲ್ಲಹಕ್ಕಲ ಗ್ರಾಮದ ಶಿವಾಜಿ ಮಾಲತೇಶ ಸಾತೇನಹಳ್ಳಿ(38) ಮೃತಪಟ್ಟ ವ್ಯಕ್ತಿ, ಇತನು ಬ್ರಿಡ್ಜ್ ಕೆಳಗೆ ಬಿಕ್ಷೆ ಬೇಡುತ್ತಿದ್ದ ಸಮಯದಲ್ಲಿ ಯಾರೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಮೃತಪಟ್ಟಿದ್ದಾನೆಂದು ಮೃತನ ಪತ್ನಿ ದೂರು ನೀಡಿದ್ದು ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.