ಜಮಖಂಡಿ

ವ್ಯಕ್ತಿ ಕಾಣೆ: ಕೃಷ್ಣಾ ನದಿಯಲ್ಲಿ ಪತ್ತೆಗಾಗಿ ಕಾರ್ಯಾಚರಣೆ

ವ್ಯಕ್ತಿ ಕಾಣೆ: ಕೃಷ್ಣಾ ನದಿಯಲ್ಲಿ ಪತ್ತೆಗಾಗಿ ಕಾರ್ಯಾಚರಣೆ

ಜಮಖಂಡಿ 28: : ತಾಲೂಕಿನ ಆಲಗೂರ ಗ್ರಾಮದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನು ನೀರಿನಲ್ಲಿ ಕಾಣಿಯಾಗಿದ್ದಾನೆಂದು ಶಂಕಿಸಲಾಗಿದೆ.  

ಆಲಗೂರ ಗ್ರಾಮದ ಸಿದ್ದಪ್ಪ ಅಡ್ಡೋಳಿ(65) ದನಕರುಗಳಿಗೆ ಮೇವು ಮಾಡಲು ಹೋದ ಸಮಯದಲ್ಲಿ ವ್ಯಕ್ತಿ ಕಾಣೆಯಾಗಿದ್ದು. ಕೃಷ್ಣಾ ನದಿಯ ದಡದಲ್ಲಿ ಸೈಕಲ್ ಹಾಗೂ ಚಪ್ಪಲಿ, ಕುಡಗೋಲ ಪತ್ತೆಯಾಗಿದ್ದು. ಮನೆಯ ಕುಟುಂಬಸ್ಥರು ಸಂಜೆಯಾದರು ಮನೆಗೆ ಬಾರದ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ನೋಡಲಾಗಿದ್ದು. ಆತ ಪತ್ತೆಯಾಗದೆ ಇರುವ ಕಾರಣ ತಾಲೂಕಾ ಆಡಳಿತ ಹಾಗೂ ಅಗ್ನಿಶಾಮಕ ದಳದವರು ಹಾಗೂ ಮೀನಗಾರರ ಸಹಾಯದಿಂದ ಕಾಣಿಯಾದ ವ್ಯಕ್ತಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆಂದು ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾಹಿತಿಯನ್ನು ನೀಡಿದ್ದಾರೆ. 

ಸುದ್ದಿ ಓದಿ