ಹೂವಿನ ಹಡಗಲಿ

ಅಪೌಷ್ಟಿಕತೆ ಮುಕ್ತ ಭಾರತ ಅಭಿಯಾನ

ಅಪೌಷ್ಟಿಕತೆ ಮುಕ್ತ ಭಾರತ ಅಭಿಯಾನ

ಹೂವಿನಹಡಗಲಿ 25 : ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆ ಮುಕ್ತ ಭಾರತವನ್ನು ಸಾಧಿಸುವ  ದ್ರಷ್ಟಿಯಿಂದ ಕೇಂದ್ರ ಸರಕಾರದ ಪೋಷನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಹೆಚ್ಚುವರಿ ಸಂವಹನ ಇಲಾಖೆ  ನಿರ್ದೇಶಕ ಎಸ್‌.ಜಿ.ರವೀಂದ್ರ ಹೇಳಿದರು 

ಪಟ್ಟಣದ ಪಂಚಮಸಾಲಿ ಭವನದಲ್ಲಿ ಮಂಗಳವಾರ ಕೇಂದ್ರ ಸಂವಹನ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡಿದರು. ’ಮಹಿಳೆಯರ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಅಭಿಯಾನ ಹಮ್ಮಿಕೊಂಡಿದೆ ಎಂದರು ಶಾಸಕ ಎಲ್‌.ಕೃಷ್ಣನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ’ಆಯುಷ್ಮಾನ್ ಯೋಜನೆಯಡಿ ಹಿರಿಯ ನಾಗರಿಕರಿಗೆ ?5 ಲಕ್ಷ ಆರೋಗ್ಯ ವಿಮೆ ದೊರೆಯಲಿದೆ.  

ಸೂರಿಲ್ಲದ ಬಡವರು ಆವಾಸ್ ಯೋಜನೆಯಡಿ ಮನೆ ಸೇರಿದಂತೆ ಕೇಂದ್ರ ಸರಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್‌.ಶ್ವೇತಾ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಂಕರನಾಯ್ಕ, ಡಾ. ಬಿ. ಶಿವಕುಮಾರ್, ವಾರದ ಗೌಸ್ ಮೊಹಿದ್ದೀನ್, ಎಚ್‌. ಪೂಜಪ್ಪ, ಹಣ್ಣಿ ಶಶಿಧರ, ಎನ್‌. ಕೋಟೆಪ್ಪ, ಬೀರಬ್ಬಿ ಬಸವರಾಜ, ಬಿ.ತೋಟನಾಯ್ಕ, ಕೆ.ಸುರೇಶ. 


ಸುದ್ದಿ ಓದಿ