ವಿಜೃಂಭಣೆಯಿಂದ ಜರುಗಿದ ಮಲ್ಲಿಕಾರ್ಜುನ ರಥೋತ್ಸವ
ಸಿಂದಗಿ07: ತಾಲೂಕಿನ ನಾಗಾವಿ ಬಿ.ಕೆ.ಗ್ರಾಮದಲ್ಲಿ ್ರ್ರಥಮ ಬಾರಿಗೆ ಮಲ್ಲಿಕಾರ್ಜುನ ದೇವರ ನೂತನ ರಥೋತ್ಸವವು ಅಸಂಖ್ಯಾತ ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ಜರುಗಿತು.
ಮಲ್ಲಿಕಾರ್ಜುನ ದೇವರ ರಥೋತ್ಸವ ಹಿನ್ನೆಲೆ ಗೋರವಗುಂಡಗಿ ಗ್ರಾಮದ ಶರಣಬಸವೇಶ್ವರ ಪಲ್ಲಕ್ಕಿಯನ್ನು ಹೊತ್ತು ಭಕ್ತಾಧಿಗಳು ಪಾಲ್ಗೊಂಡಿದ್ದರು. ರಥೋತ್ಸವದಲ್ಲಿ ನಂದಿಕೋಲ, ಪುರವಂತರ ಸೇವೆ, ಬಾಜಾ-ಬಜಂತ್ರಿ, ಡೊಳ್ಳು ಕುಣಿತದ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಿದ್ದವು. ರಥೋತ್ಸವ ಆರಂಭವಾಗುತ್ತಿದಂತೆ ನೆರೆದ ಅಪಾರ ಭಕ್ತ ಸಮೂಹವು ಮಲ್ಲಿಕಾರ್ಜುನ ದೇವರ ತೇರಿನ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಪರಾಕಾಷ್ಠೆಯನ್ನು ಪ್ರದರ್ಶಿಸಿದರು. ಇನ್ನು ಸುಮಂಗಲೆಯರು ದೇವರ ರಥಕ್ಕೆ ಆರತಿ ಬೆಳಗಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.
ಇದಕ್ಕೂ ಮೊದಲು ಗಾಣಿಗ ಗುರುಪೀಠವಾದ ವಿಜಯಪುರ ವನಶ್ರೀ ಮಠದ ಡಾ.ಜಯಬಸವಕುಮಾರ ಜಗದ್ಗುರು, ಬೋರಗಿ-ಪುರದಾಳದ ತಪೋರತ್ನ ಮಹಾಲಿಂಗೇಶ್ವರ ಶ್ರೀಗಳು, ಅಡವಿಲಿಂಗ ಮಹಾರಾಜರು, ಯಂಕಂಚಿಯ ಅಭಿನವ ರುದ್ರಮುನಿ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ರಥೋತ್ಸವಕ್ಕೆ ಚಾಲನೆ ನೀಡಿದರು.
ಮುಖಂಡರಾದ ಗುರುನಗೌಡ ಪಾಟೀಲ, ತಮ್ಮನಗೌಡ ಪಾಟೀಲ, ಗೊಲ್ಲಾಳಪ್ಪಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಸುಭಾಸಗೌಡ ಪಾಟೀಲ, ಮೇಲಪ್ಪಗೌಡ ಪಾಟೀಲ, ಸಿದ್ದನಗೌಡ ಕುರನಳ್ಳಿ, ನಾಗಾವಿ ಬಿ.ಕೆ. ಗ್ರಾಪಂ ಅಧ್ಯಕ್ಷ ವಿಶ್ವನಾಥ ಜೋಗೂರ, ಗ್ರಾಪಂ ಉಪಾಧ್ಯಕ್ಷ ಮನು ನಾಯಕ, ಸಿದ್ದಲಿಂಗ ಹೂಗಾರ, ಸಿದ್ದು ಹೊಸಮನಿ, ಗುಂಡು(ಶರಣು) ಹಡಪದ, ಮಡು ವಾಲೀಕಾರ ಸೇರಿದಂತೆ ವಿವಿಧ ಗ್ರಾಮಗಳ ಗಣ್ಯಾತಿಗಣ್ಯರು ಭಾಗವಹಿಸಿದ್ದರು.