ಮಲ್ಲಿಕಾರ್ಜುನ ಬನ್ನಿಗೆ ಪತ್ನಿ ವಿಯೋಗ: ಸಾಹಿತಿಗಳ, ಗಣ್ಯರ ಸಂತಾಪ
ಗುಳೇದಗುಡ್ಡ 29: ಇಲ್ಲಿನ ಮಾಜಿಶಾಸಕ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳಾದ ಮಲ್ಲಿಕಾರ್ಜುನ ಬನ್ನಿ ಅವರ ಪತ್ನಿ ವೀಣಾ ಮಲ್ಲಿಕಾರ್ಜುನ ಬನ್ನಿ (70) ಗುರುವಾರ ಬೆಳಗಿನ ಜಾವ ನಿಧನರಾದರು. ಮೃತರು ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಓರ್ವ ಮಗ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ : ವೀಣಾ ಮಲ್ಲಿಕಾರ್ಜುನ ಬನ್ನಿ ಅವರ ನಿಧನಕ್ಕೆ ಮತಕ್ಷೇತ್ರದ ರಾಜಕೀಯ ಮುಖಂಡರು, ಹಿರಿಯ ಸಾಹಿತಿಗಳು ಹಾಗೂ ವಿವಿಧ ಸಾಹಿತ್ಯ ಸಂಘಟನೆಗಳು ತಮ್ಮ ಸಂತಾಪ ವ್ಯಕ್ತಪಡಿಸಿವೆ. ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಬಾದಾಮಿಯ ಬಿ.ಬಿ.ಚಿಮ್ಮನಕಟ್ಟಿ, ಎಂ.ಕೆ.ಪಟ್ಟಣಶೆಟ್ಟಿ, ಮಹೇಶ ಹೊಸಗೌಡ್ರ, ಮಹಾಂತೇಶ ಮಮದಾಪೂರ, ರವೀಂದ್ರ ಪಟ್ಟಣಶೆಟ್ಟಿ, ವಸಂತಸಾ ದೊಂಗಡೆ, ಅಶೋಕ ಹೆಗಡಿ, ಹಣಮಂತ ಮಾವಿನಮರದ, ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆ ಶರೀಫಾ ಮಂಗಳೂರ, ತಾಪಂ ಅಧ್ಯಕ್ಷೆ ರೇಣುಕಾ ಗಾಜಿ, ಭಾಗ್ಯಾ ಉದ್ನೂರ ಸೇರಿದಂತೆ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು, ಸಾಹಿತಿಗಳಾದ ಡಾ. ಭೀಮನಗೌಡ ಪಾಟೀಲ, ಡಾ. ಎಚ್.ಎಸ್. ಘಂಟಿ, ಪ್ರೊ.ಸಿ.ಎಂ.ಜೋಶಿ, ಮಹಾದೇವ ಜಗತಾಪ, ಡಾ. ಸಣ್ಣವೀರಣ್ಣ ದೊಡಮನಿ, ಸಿದ್ದಲಿಂಗಪ್ಪ ಬರಗುಂಡಿ, ಡಾ. ಸಂಗಮೇಶ ಕಲ್ಯಾಣಿ, ಎಸ್.ಎಸ್.ಹೂಗಾರ, ಬಸವರಾಜ ಯಂಡಿಗೇರಿ, ಮಲ್ಲಿಕಾರ್ಜುನ ರಾಜನಾಳ, ಸುರೇಶ ಸಾರಂಗಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಕರ್ನಾಟಕ ಜಾನಪದ ಪರಿಷತ್ತು ಘಟಕದ ಪದಾಧಿಕಾರಿಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.