ಮಾಲದಿನ್ನಿ: ರುಕ್ಮವ್ವ ಅಧ್ಯಕ್ಷೆ, ಸೀತವ್ವ ಉಪಾಧ್ಯಕ್ಷೆ
ಗೋಕಾಕ 03: ತಾಲೂಕಿನ ಮಾಲದಿನ್ನಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರುಕ್ಮವ್ವಾ ಸಿದ್ದಪ್ಪ ಭರಮನ್ನವರ ಉಪಾಧ್ಯಕ್ಷರಾಗಿ ಸೀತವ್ವಾ ನಾಗಪ್ಪ ಮೆಳವಂಕಿ ಅವಿರೋಧವಾಗಿ ಆಯ್ಕೆಯಾದರು.
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಸೂಚನೆ ಮೇರೆಗೆ ಮಂಗಳವಾರದಂದು ಮಾಲದಿನ್ನಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಜರುಗಿತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಗ್ರಾಪಂ ಹಿರಿಯ ಸದಸ್ಯರಾದ ಹನಮಂತ ದುರ್ಗನ್ನವರ, ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು ಇತರರು ಇದ್ದರು.