ಹೂವಿನ ಹಡಗಲಿ

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಮೂಡಿಸಿರಿ : ಟಿ ಪಾಲಾಕ್ಷ

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಮೂಡಿಸಿರಿ : ಟಿ ಪಾಲಾಕ್ಷ

ಹೂವಿನ ಹಡಗಲಿ 25: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸಬೇಕು ಎಂದುಪಿ ಯು ಉಪನಿರ್ದೇಶಕ ಟಿ ಪಾಲಾಕ್ಷ ಹೇಳಿದರು. ಪಟ್ಟಣದ ಎಸ್ ಕೆ ಜಿ ಜಿ ಹಾಗೂ ಜಿ ಪಿ ಜಿ ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.

ಖಾಸಗಿ ಕಾಲೇಜುಗಳಲ್ಲಿ ಇರುವ ಹಾಗೆ ಹೈಟೆಕ್ ಮಾದರಿಯ ವಿಜ್ಞಾನ ಪ್ರಯೋಗಾಲಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸರ್ಕಾರ ನಿರ್ಮಿಸಿದೆ. ಪೋಷಕರು ದೂರದ ಮೂಡುಬಿದಿರೆ, ಉಡುಪಿ, ಮಂಗಳೂರಿಗೆ ಲಕ್ಷಾಂತರ ಹಣ ವ್ಯಯಿಸುವ ಬದಲು ಸರ್ಕಾರಿ ಕಾಲೇಜುಗಳಿಗೆ ಆದ್ಯತೆ ನೀಡಲು ಮನ ಒಲಿಸಬೇಕು ಎಂದರು.ವಿಶೇಷ ಯೋಜನೆ ರೂಪಿಸಿ ಜಾರಿಗೆ ತರುವ ಕೆಲಸ ನಿರಂತರವಾಗಿ ಆಗಬೇಕು ಎಂದು ಹೇಳಿದರು.     ವಿದ್ಯಾರ್ಥಿಗಳ ಗೈರು ಹಾಜರಾತಿ ಬಗ್ಗೆ ತಂದೆ ತಾಯಿ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಶ್ನೆ ಪತ್ರಿಕೆ ಸ್ವರೂಪ ಪರೀಕ್ಷೆ ಸಮಯ ಬದಲಾವಣೆ ಆಗಲಿದ್ದು ವಿದ್ಯಾರ್ಥಿಗಳಿಗೆ ಈ ಕುರಿತು ಮುಂಚಿತವಾಗಿ ಮಾಹಿತಿ ನೀಡಿರಿ ಎಂದು ತಿಳಿಸಿದರು.

ಕಾಲೇಜಿನ ಶೈಕ್ಷಣಿಕ ವಾತಾವರಣ, ವಿದ್ಯಾರ್ಥಿಗಳ ಹಾಜರಾತಿ, ಶೈಕ್ಷಣಿಕ ಪ್ರಗತಿ ಕುರಿತು ಪರೀಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು. ಪ್ರಾಚಾರ್ಯರಾದ ಎ ಕೊಟ್ರಗೌಡ ಕೋರಿ ಹಾಲೇಶ್ ಉಪನ್ಯಾಸಕರಾದ ಶಂಕರ್ ಬೆಟಗೇರಿ, ವಿರುಪಾಕ್ಷಪ್ಪ ಬಡಿಗೇರ್, ನಟರಾಜ ಪಾಟೀಲ್, ಬಸೆಟ್ಟಿ ಪ್ರಕಾಶ್, ಶಿವಕುಮಾರ್,ಆರತಿ, ಶಬೀನಾ, ಇರ್ಫಾನ್ ಬಾನು, ಪ್ರದೀಪ್ ಕುಮಾರ್ ಜೆ, ಮಧುನಾಯ್ಕ ವಿಶ್ವನಂದಿನಿ, ಪವನ್ ಕುಮಾರ್, ಶಿವಪ್ಪ, ಸುನಂದಾ, ಜಿ ಮಹೇಶ್, ಡಿ ಕೃಷ್ಣ ಇದ್ದರು. 


ಸುದ್ದಿ ಓದಿ