ಮನರಂಜನೆ

ನಾನು ಯಾವುದೇ ತಪ್ಪು ಮಾಡಿಲ್ಲ: ಕಿರುತೆರೆ ನಟ ಅಭಿಷೇಕ್

ನಾನು ಯಾವುದೇ ತಪ್ಪು ಮಾಡಿಲ್ಲ: ಕಿರುತೆರೆ ನಟ ಅಭಿಷೇಕ್

ಬೆಂಗಳೂರು, ಸೆ.22 :ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಆಂತರಿಕ ವಿಭಾಗದ ಪೊಲೀಸರು ಕಿರುತೆರೆ ಸೇರಿ ಹಿರಿತೆರೆಯವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ‌.

ಈಗಾಗಲೇ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ, ಮಾಜಿ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ, ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ, ಖಾಸಗಿ ವಾಹಿನಿ ಸಿಬ್ಬಂದಿ ನಿಶ್ಚಿತಾ ಶರತ್ ಅವರ ವಿಚಾರಣೆ ನಡೆಸಿದ್ದು, 12 ಜನರಿಗೆ ನೋಟಿಸ್ ನೀಡಿದೆ.

ಇಂದು ಕಿರುತೆರೆ ನಟ ಅಭಿಷೇಕ್ ಹಾಗೂ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತೀ ಭಟ್ ವಿಚಾರಣೆಗೆ ಹಾಜರಾಗಲಿದ್ದಾರೆ. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್ ಡಿ ನೋಟಿಸ್ ಜಾರಿಮಾಡಿದ್ದರಿಂದ ಇಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ಎಂದು ಕಿರಿತೆರೆ ನಟ ಅಭಿಷೇಕ್ ತಿಳಿಸಿದ್ದಾರೆ.

ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಹೀಗಿರುವಾಗ ಏಕೆ ಹಿಂದೆ ಸರಿಯಬೇಕು. ಅಲ್ಲದೇ, ತಾವು ಯಾರೊಂದಿಗೂ ಯಾವುದೇ ಪಾರ್ಟಿ ಮಾಡಿಲ್ಲ. ಆದರೂ, ವಿಚಾರಣೆಗೆ ಹಾಜರಾಗುವಂತೆ ಆಂತರಿಕ ಭದ್ರತಾ ವಿಭಾಗದಿಂದ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವೆ ಎಂದು ತಿಳಿಸಿದರು. ಬೇರೆಯವರ ಬಗ್ಗೆ ಮಾಹಿತಿ ಏನಾದರೂ ಪಡೆಯಲು  ನೋಟಿಸ್ ನೀಡಿರಬಹುದೆಂದು ನನಗನಿಸುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


ಸುದ್ದಿ ಓದಿ