ಕಾಗವಾಡ

ಜಾನುವಾರಗಳ ರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಜಾನುವಾರಗಳ ರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ

ಕಾಗವಾಡ 24: ಪ್ರಸಕ್ತ ಮಳೆಗಾಲ ಸಮೀಪಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಜುಗುಳ, ಮಂಗಾವತಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ನಿರ್ವಣೆ ಕುರಿತು ಪರಿಶೀಲಿಸಿದರು.

ಕೃಷ್ಣಾ ನದಿಗೆ ಮಹಾಪೂರ ಬರಬಹುದಾದ ಹಿನ್ನೆಲೆಯಲ್ಲಿ ನದಿ ತೀರಕ್ಕೆ ಭೇಟಿ ನೀಡಿ ನೀರಿನ ಒಳಹರಿವು ಬಗ್ಗೆ ಪರಿಶೀಲಿಸಿದರು. ಜುಗುಳ ಹಾಗೂ ಮಂಗಾವತಿ ಗ್ರಾಮಗಳಿಗೆ ಭೇಟಿ ನೀಡಿ ಬಳಿಕ 2019 ಮತ್ತು 2021 ರ ಪ್ರವಾಹ ಸಂದರ್ಭದಲ್ಲಿ ಒದಗಿಬಂದ ಸ್ಥಿತಿಗತಿ ಬಗ್ಗೆ ವಿವರವಾದ ಮಾಹಿತಿ ಪಡೆದರು.

ಪ್ರಾಣ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳಿಗೆ ಜೀವರಕ್ಷಣೆ ಆದ್ಯತೆ ನೀಡಬೇಕು ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಈಗಾಗಲೇ ಈ ಕುರಿತು ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಆ ಪ್ರಕಾರ ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು ಜನರ ರಕ್ಷಣೆಗೆ ಅಗತ್ಯ ಇರುವ ಫೋಟೋಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜುಗುಳ ಗ್ರಾಮದ ಮುಖಂಡರಾದ ಅಣ್ಣಾಸಾಹೇಬ್ ಪಾಟೀಲ್, ಅನಿಲ್ ಕರೋಲೆ, ಕಾಕ ಪಾಟೀಲ್, ರಾಜುಗೌಡ ಪಾಟೀಲ್, ಎಸ್.ಆರ್ ನಂದ್ಯಾಳ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಹಾಗೂ ಚಿಕ್ಕೋಡಿ ಉಪವಿಭಾಗ ಅಧಿಕಾರಿ ಸಂತೋಷ್ ಕಾಮಗೌಡ ಇವರಿಗೆ ಮಹಾಪೂರದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಕಾಗವಾಡ ತಹಶೀಲ್ದಾರ್ ರಾಜೇಶ್ ಬುಲರ್ಿ ಹಾಗೂ ಇನ್ನುಳಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಉಪಸ್ಥಿತ ರಾಗಿ ಮಹಾಪೂರ ಸಿತಿಗತಿ ಬಗ್ಗೆ ಜಿಲ್ಲಾಧಿಕಾರಿಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಎಲ್ಲರೂ ಒಂದುಗೂಡಿ ಬರುವ ಮಹಾಪೂರ ಸ್ಥಿತಿಗತಿ ಗಂಭೀರ ತೆಗೆದುಕೊಂಡು ಎದುರಿಸೋಣಾ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು 

ಸುದ್ದಿ ಓದಿ