ಧರ್ಮದ ಹಾದಿಯಿಂದ ಹಣ ಗಳಿಸಿ: ದಾನೇಶ್ವರ ಸ್ವಾಮೀಜಿ
ಅಥಣಿ 23: ಪಾಪಿಯ ಧನ ಪ್ರಾಯಶ್ಚಿತಕಲ್ಲದೇ ಸತ್ಪಾತ್ರಕ್ಕೆ ಸಲ್ಲದು ಎಂಬ ಶರಣರ ವಾಣಿಯಂತೆ ಧರ್ಮದ ಹಾದಿಯಿಂದ ಉಳಿಸಿ ಗಳಿಸಿದ ಸಂಪತ್ತು ಧರ್ಮದ ಕಾರ್ಯಗಳಿಗೆ ಉಪಯೋಗವಾಗಬೇಕು ಎಂದು ಬಂಡಿಗಣಿ ಬಸವಗೋಪಾಲ ಮಠದ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಹೇಳಿದರು.
ಬಂಡಿಗಣಿಯ ಬಸವಗೋಪಾಲ ಮಠದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಸರಿಯಾದ ದಾರಿಯಲ್ಲಿ ನಡೆದು ಗಳಿಸಿದ ಹಣದಿಂದ ಕುಟುಂಬವಷ್ಟೇ ಅಲ್ಲ ಸಮಾಜವೂ ಸಹ ಆರೋಗ್ಯವಾಗಿರುತ್ತದೆ. ಆದ್ದರಿಂದ ಉತ್ತಮವಾದ ಹಾಗೂ ನೀತಿಯುತವಾದ ದಾರಿಯಿಂದ ಹಣ ಗಳಿಸಬೇಕು ಎಂದ ಅವರು ಹಿರಿಯರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಇಂದಿನ ಜನಾಂಗ ಅದರಂತೆ ತಮ್ಮಜೀವನವನ್ನೂ ಸಹ ನಡೆಸಬೇಕು. ದುಶ್ಚಟಗಳಿಗೆ ದುಷ್ಟ ಆಲೋಚನೆಗಳಿಗೆ ಬಲಿಯಾಗದೆ ಸ್ವಂತ ಬಲದಿಂದ ಜೀವನ ನಡೆಸಬೇಕು ಎಂದರು.
ದುಶ್ಚಟಗಳಿಗೆ ದಾಸರಾದಂತಹ ಯುವಕರು ಸ್ವ ಪ್ರೇರಣೆಯಿಂದ ಮುಂದೆ ಬಂದು ಎಂದಿಗೂ ದುಶ್ಚಟಗಳಿಗೆ ಬಲಿಯಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು.