ಗುಳೇಗುಡ್ಡ

ಸರಳವಾಗಿ ಮಹಾವೀರ ಜಯಂತಿ ಆಚರಣೆ

ಸರಳವಾಗಿ ಮಹಾವೀರ ಜಯಂತಿ ಆಚರಣೆ
ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು.

ಗುಳೇದಗುಡ್ಡ 26:  ಪಟ್ಟಣದ ಪುರಸಭೆಯಲ್ಲಿ ಮಹಾವೀರ ಜಯಂತಿಯನ್ನು ಮಹಾವೀರನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.  

ಪುರಸಭೆ ಮುಖ್ಯಾಧಿಕಾರಿ ಸಿ.ಎಸ್‌.ಮಠಪತಿ ಮಹಾವೀರನ ಆದರ್ಶಗಳನ್ನು ನಾವು ಎಲ್ಲರೂ ಅಳವಡಿಕೊಳ್ಳಬೇಕೆಂದು ಹೇಳಿದರು. ಎಂ.ಎಂ.ನಂದಿಕೇಶ್ವರ, ಕೆ.ಎನ್‌.ತಟ್ಟಿಮಠ, ಶಿವಾನಂದ ಬ್ಯಾಳಿ, ಎಫ್‌.ಡಿ.ವಾಲಿಕಾರ, ವಿನಾಯಕ ಹೋಟಿ ಹಾಗೂ ಅಶೋಕ ಚಿಂದಿ ಉಪಸ್ಥಿತರಿದ್ದರು. 

ತಹಶೀಲ್ದಾರ ಕಚೇರಿಯಲ್ಲಿ ಆಚರಣೆ: ಸಮಾಜದ ಉದ್ಧಾರ ಬಯಸಿದ ಜೈನ ಧರ್ಮದ ತೀರ್ಥಂಕನಾದ ಮಹಾವೀರನ ಜಯಂತಿಯನ್ನು ಕೋವಿಡ್ ಇರುವ ಹಿನ್ನಲೆಯಲ್ಲಿ ಇಲ್ಲಿನ ತಾಲೂಕ ಆಡಳಿತದಿಂದ ತಹಶೀಲ್ದಾರ ಕಛೇರಿಯಲ್ಲಿ ಮಹಾವೀರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾಯಿತು. 

ಉಪತಹಶೀಲ್ದಾರ ವ್ಹಿ. ವಾಯ್‌. ಬಡಿಗೇರ ಪೂಜೆ ಸಲ್ಲಿಸಿದರು. ಕಛೇರಿ ಸಿಬ್ಬಂದಿಗಳಾದ ಎಂ.ಎಂ.ತುಪ್ಪದ, ಎಸ್‌.ಜಿ.ಪಾರ್ವತಿಮಠ, ಅನ್ವರ ವಾಲೀಕಾರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ