ರಾಣೆಬೆನ್ನೂರ

ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ

ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ

ರಾಣಿಬೆನ್ನೂರ  03: ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯು ಸಹ ಅನುಸರಿಸುತ್ತಾರೆ ಎಂದು ಮುಖ್ಯಶಿಕ್ಷಕ ವಿ.ವಿ ಬಂಗಾರಿ ಹೇಳಿದರು 

ತಾಲೂಕಿನ ಮಾಕನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಗಾಂಧೀಜಿಯವರು ಆಧ್ಯಾತ್ಮಕ ಚಿಂತಕರು, ಸಮಾಜ ಸುಧಾರಕರು ಇಡಿ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಮಂತ್ರವನ್ನು ಹೇಳಿಕೊಟ್ಟಂತಹ ಮಹಾನ್ ಚೇತನರಾಗಿದ್ದರು ಎಂದರು. 

ಅದೇ ರೀತಿ ಭಾರತ ದೇಶಕಂಡ ಭಲಿಷ್ಠ ಪ್ರಧಾನ ಮಂತ್ರಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ದೇಶದಲ್ಲಿ ಬಡತನ, ಹಸಿವು ತಾಂಡವಾಡುವ ಸಂದರ್ಭದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತನ್ನು ಕೊಟ್ಟು ದೇಶದಲ್ಲಿ ಜೈ ಜವಾನ್ ಜೈ ಕಿಸಾನ್ ಮುಖಾಂತರ ರೈತರು ಮತ್ತು ಯೋದರ ಬಗ್ಗೆ ಜಾಗೃತಿ ಮೂಡಿಸಿದ್ದರು. ಗಾಂದೀಜಿ ಮತ್ತು ಶಾಸ್ತ್ರೀಯವರ ಚಿಂತನೆ ಮತ್ತು ಆದರ್ಶಗಳು ಸರ್ವಕಾಲಿಕ ಸತ್ಯ ಎಂದರು. 

ಸಹಶಿಕ್ಷಕರಾದ ಆರ್‌.ಸಿ. ಬೆಳ್ಳೂಡಿ, ಮನೋಜ ಬಿ.ಕೆ,ೆಸ್‌.ಐ. ಕೋರೇರ, ರಾಜೇಶ್ವರಿ ಪೂಜಾರ, ಗಾಯತ್ರಾ ಚಿನ್ನಣ್ಣನವರ, ಗ್ರಾಮದ ಮುಖಂಡರಾದ ಮಲ್ಲನಗೌಡ ಮುದಿಗೌಡ್ರ, ಮುದಕನಗೌಡ ಮುದಿಗೌಡ್ರ ಮತ್ತು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ