ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ನೇಕಾರ ಒಕ್ಕೂಟದ ಮಹಾಸಭೆ: ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಮುಕ್ತೇನಹಳ್ಳಿ ಆಯ್ಕೆ

ರಾಣೇಬೆನ್ನೂರಲ್ಲಿ ನೇಕಾರ ಒಕ್ಕೂಟದ ಮಹಾಸಭೆ: ಜಿಲ್ಲಾ ಅಧ್ಯಕ್ಷರಾಗಿ ಹನುಮಂತಪ್ಪ ಮುಕ್ತೇನಹಳ್ಳಿ ಆಯ್ಕೆ

ರಾಣೇಬೆನ್ನೂರು 29:  ಇಲ್ಲಿನ ದೇವರಗುಡ್ಡ ರಸ್ತೆಯ ಶ್ರೀ ತುಳಜಾ ಭವಾನಿ ದೇವಸ್ಥಾನ ಸಭಾ ಭವನದಲ್ಲಿ ಇತ್ತೀಚಿಗೆ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ, ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಮಹಾಸಭೆ ನಡೆಯಿತು. ಜಿಲ್ಲೆಯ ಎಲ್ಲಾ ಮುಖಂಡರ ನೇತೃತ್ವದಲ್ಲಿ ನಡೆದ ಈ ಮಹಾಸಭೆಯಲ್ಲಿ, ಜಿಲ್ಲೆಯ ನೂತನ ಅಧ್ಯಕ್ಷರಾಗಿ, ನಗರದ ಹನುಮಂತಪ್ಪ ತಿಮ್ಮಣ್ಣ ಮುಕ್ತೇನಹಳ್ಳಿ  ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ, ನೂತನ ಅಧ್ಯಕ್ಷ ಹನುಮಂತಪ್ಪ ಅವರು, ಅವಕಾಶಗಳು ಎಲ್ಲರಿಗೂ ಎಲ್ಲ ಕಾಲಕ್ಕೂ ಸಿಗಲಾರವು ಇಂಥ ಸಂದರ್ಭದಲ್ಲಿ  ಮುಖಂಡರ ಪ್ರೀತಿ ವಿಶ್ವಾಸ ಅಭಿಮಾನದಿಂದ ತಮಗೆ ಸಿಕ್ಕಿರುವ ಈ ಸೇವಾ ಭಾಗ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನೆರವೇರಿಸುವ ಉದ್ದೇಶ ತಾವು ಹೊಂದಿರುವುದಾಗಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.           

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ, ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಅವರು, ಸಮಾಜ ಸಂಘಟನೆ ಇಂದಿನ ವಾಗಿದ್ದು, ಸಮುದಾಯ ಒಂದಾಗಿ ಒಗ್ಗಟ್ಟಾಗಿ, ಜನಪರ ಸೇವಾ  ಕಾರ್ಯಗಳ ಮೂಲಕ, ಸಮಾಜ ಸಂಘಟಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕರು ಪಾಲ್ಗೊಂಡು, ಸಹಕರಿಸಬೇಕಾದ ಅಗತ್ಯವಿದೆ ಎಂದರು.             

ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಡಾ: ಬಸವರಾಜ ಎಸ್ ಕೇಲಗಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯವನ್ನು ಸಂಘಟಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಮಾಜದ ಪ್ರತಿಯೊಬ್ಬರೂ ಈ ಹಿಂದಿಗಿಂತಲೂ ಇಂದು ಜಾಗೃತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುತ್ತಿರುವುದು ಸಮಾಜಕ್ಕೆ ಮತ್ತು ಸಂಘಟನೆಯ ಮುಂಚೂಣಿ ನಾಯಕರಿಗೆ ಸಂತೋಷ ತರುವ ಸಂಗತಿಯಾಗಿದೆ ಎಂದರು.         

ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ ರಾಜ್ಯ ಸಮಿತಿ ಸದಸ್ಯ ನವೀನ್ ಚಿಲ್ಲಾಳ್ ದಯಾನಂದ್ ಶೆಟ್ಟಿ ನಗರಸಭಾ ಮಾಜಿ ಸದಸ್ಯ ಬಸವರಾಜ್ ಲಕ್ಷ್ಮೇಶ್ವರ, ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಮುಖಂಡರಾದ ಕರಿಬಸಪ್ಪ ನೀಲಗುಂದ, ನಾಗರಾಜ ಅಗಡಿ, ರಾಮಕೃಷ್ಣ ತಾಂಬೆ, ಬಸವರಾಜ ಮೈಲಾರ್ ಗಣೇಶ ಹಾವನೂರ್, ಮಾರುತಿ ಗರಡಿಮನಿ, ಪ್ರಕಾಶ ಅಗಡಿ ಬಸವರಾಜ ಐರಣಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ವೀರಣ್ಣ ಕೊಟ್ಟೂರು, ಪ್ರಭು ಕೊಟ್ಟೂರು, ಪ್ರಭಣ್ಣ ಚಿನ್ನಿಕಟ್ಟೆ, ನೀಲಪ್ಪ ಕುಮಾರ​‍್ಪನವರ್, ನಾಗಪ್ಪ ಹಟಗಾರ್, ಸೋಮಪ್ಪ ವಿಭೂತಿ, ವಾಸಪ್ಪ ನೇಕಾರ್, ಶಿವಾನಂದ ಕದರಮಂಡಲಗಿ, ನೀಲಕಂಠಪ್ಪ ರೊಕಡೆ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ