ಯರಗಟ್ಟಿ

ಮಹರ್ಷಿ ವಾಲ್ಮೀಕಿ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ: ತಹಶೀಲ್ದಾರ ಮಠದ

ಮಹರ್ಷಿ ವಾಲ್ಮೀಕಿ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ: ತಹಶೀಲ್ದಾರ ಮಠದ

ಯರಗಟ್ಟಿ: ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಯರಗಟ್ಟಿ ತಹಶೀಲ್ದಾರ ಮಹಾಂತೇಶ ಮಠದ ಅವರು ತಿಳಿಸಿದರು.  

ತಾಲೂಕಾ ಆಡಳಿತದಿಂದ ಹಾಗೂ ಪರಿಶಿಷ್ಟ ವರ್ಗಗಳ ಮುಖಂಡರ ಸಂಯುಕ್ತಾಶ್ರಯದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವಿಯತೆಯೇ ಧರ್ಮ ಎಂಬದನ್ನು ಪ್ರತಿಪಾದಿಸಿದ್ದರು. ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಾಯಣದಿಂದ ತಿಳಿದು ಬರುತ್ತದೆ ಎಂದು ತಿಳಿಸಿದರು. 

ವಾಲ್ಮೀಕಿ ರಾಮಾಯಣ ಪ್ರತಿನಿತ್ಯ ನಡೆಯುವ ಘಟನೆಗಳಾಗಿದ್ದು, ಶಾಂತಿ, ಸಹಬಾಳ್ವೆ, ಅಹಿಂಸೆಯನ್ನು ತೋರಿಸಿಕೊಟ್ಟಿದೆ. ಅದೇ ರೀತಿಯಲ್ಲಿ ಬುಧ, ಬಸವ, ಅಂಬೇಡ್ಕರ್ ಅವರು ಕೂಡು ಮಾನವೀಯತೆಯ ಮೌಲ್ಯಗಳನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.  

ಗ್ರೇಡ್ 2 ತಹಶೀಲ್ದಾರ ಎಸ್ ಜಿ. ದೊಡ್ಡಮನಿ, ಕೆ. ಎಂ. ಗಡ್ಕರಿ, ಶಾಹೀನ ಮಿಶ್ರಿಕೋಟಿ, ಎಸ್‌. ಪಿ. ದೊಡ್ಡವಾಡ, ವಸಂತ ಪೂಜಾರಿ, ಮಂಜುನಾಥ ಬಡಿಗೇರ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಮಠಪತಿ, ಸ್ವರೂಪ ಚಪಳಿ, ಮಹೇಶ ಅಡ್ಡಣಗಿ, ನಿವೃತ್ತ ತಹಶೀಲ್ದಾರ ಬಾಬಣ್ಣಾ ತಳವಾರ, ಆಯ್‌. ಬಿ. ಗೌಡರ, ಸ್ಥಳೀಯ ಮುಖಂಡರಾದ ಯಕ್ಕೇರ​‍್ಪ ತಳವಾರ, ಸುರೇಶ ಉದ್ದಪ್ಪನವರ, ಯಕ್ಕೇರ​‍್ಪ ಮಾಳಗಿ, ಶಿವಪ್ಪ ಉದ್ದಪ್ಪನವರ, ವಾಚಪೆ ಗುಡುಮಕೇರಿ, ತುಕಾರಾಮ ಹಣಬರ ಸೇರಿದಂತೆ ತಾಲೂಕಾ ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ