ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಜನವರಿ 31 ವರೆಗೂ ವಿಸ್ತರಣೆ
ಮುಂಬೈ
, ಡಿಸೆಂಬರ್ 30: ತೀವ್ರ ಭೀತಿ ಹುಟ್ಟಿಸಿರುವ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕಿನ ಕಾರಣ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ರೂಪಾಂತರ ಕೊರೊನಾಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಹೊಸ ವರ್ಷದ ಜನವರಿ 31 ರವರೆಗೂ ಲಾಕ್ ಡೌನ್ ಮರು ಜಾರಿಗೊಳಿಸಲಾಗಿದೆ ಎಂದೂ ವರದಿಯಾಗಿದೆ.
ದೇಶದಲ್ಲಿ
ಈಗಾಗಲೇ ರೂಪಾಂತರಿ ಕೊರೊನಾ ವೈರಸ್ ಎಂಟ್ರಿ ಆಗಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದ 20 ಜನರಲ್ಲಿಈಗಾಗಲೇ
ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದಲ್ಲಿ
ಹೊಸ ವರ್ಷದ ಜನವರಿ 31 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.