ಕಾಗವಾಡ

ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಸ್ಥಾನ: ಶಾಸಕ ಸುರೇಶ ಖಾಡೆಗೆ ಸನ್ಮಾನ

ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಸ್ಥಾನ: ಶಾಸಕ ಸುರೇಶ ಖಾಡೆಗೆ ಸನ್ಮಾನ

ಲೋಕದರ್ಶನ ವರದಿ 

ಕಾಗವಾಡ 09: ಮಹಾರಾಷ್ಟ್ರ ರಾಜ್ಯದ ಸಚಿವ ಸಂಪುಟದಲ್ಲಿ ಕಾಗವಾಡ ತಾಲೂಕಿನ ನೆರೆಯ ಮಿರಜ್ ಮತಕ್ಷೇತ್ರದ ಶಾಸಕ ಸುರೇಶ ಖಾಡೆ ಇವರನ್ನು ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಿದ್ದರಿಂದ ಅವರನ್ನು ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ವಿನಾಯಕ್ ಬಾಗಡಿ ಮುಂಬೈಯಲ್ಲಿ ಭೇಟಿ ನೀಡಿ ಸನ್ಮಾನಿಸಿದರು. 

ಮಂಗಳವಾರ ದಿ. 9ರಂದು ಮಹಾರಾಷ್ಟ್ರ ರಾಜ್ಯದ ಸಚಿವ ಸಂಪುಟ ರಚನೆಯಾಯಿತು. ಇದರಲ್ಲಿ ನೆರೆಯ ಮೀರಜ ಮತಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಖಾಡೆ ಇವರನ್ನು ಸಚಿವರಾಗಿ ಆಯ್ಕೆ ಮಾಡಲಾಗಿದೆ. 

ಇಲ್ಲಿಯ ಕಾರ್ಯಕರ್ತರು ಮುಂಬೈಗೆ ತೆರಳಿ ನೂತನ ಸಚಿವರನ್ನು ಸನ್ಮಾನಿಸಿದ್ದಾರೆ. ನೂತನ ಸಚಿವರನ್ನು ಸನ್ಮಾನಿಸುವಾಗ ಮದಭಾವಿ ಗ್ರಾಮದ ಎಪಿಎಂಸಿ ಸಂಚಾಲಕ ಹಾಗೂ ಅಥಣಿ ಎಪಿಎಂಸಿ ಉಪಾಧ್ಯಕ್ಷ ಶಿವಾನಂದ ಮಗದುಮ್, ಗ್ರಾಪಂ ಸದಸ್ಯರಾದ ಕೃಷ್ಣಾ ಶಿಂಧೆ, ಅಪ್ಪಾಸಾಹೇಬ ಚೌಗಲಾ, ವಿಜಯ್ ಭಂಡಾರೆ, ಬಾಹುಬಲಿ ಉಮದಿ, ಉಮೇಶ್ ಆರಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ