ಕೃಷಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆ
ಕಂಪ್ಲಿ20 ತಾಲೂಕಿನ ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆ ಶುಕ್ರವಾರ ನಡೆಯಿತು.ಸಂಘದ ಅಧ್ಯಕ್ಷ ಸಂಗಟಿ ಮಾರೇಶ ಮಾತನಾಡಿ, ಸಂಘ ಕಳೆದ ವರ್ಷ 9,19,352ರೂ ನಿವ್ವಳ ಲಾಭಗಳಿಸಿದೆ. 3420 ಜನ ಸದಸ್ಯರಿದ್ದಾರೆ. 50.37ಲಕ್ಷರೂ ಠೇವಣಿ ಸಂಗ್ರಹಿಸಿದೆ. ಕೃಷಿಯೇತರ ಸಾಲ 9.42ಲಕ್ಷರೂ, ಸದಸ್ಯ ಕೆ.ಸಿ.ಸಿ ಸಾಲ 544.76 ಲಕ್ಷರೂ 690ಜನರಿಗೆ ವಿತರಿಸಿದೆ ಎಂದರು. ಸಂಘದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು. ಉಪಾಧ್ಯಕ್ಷ ಗೌಡ್ರು ನಾಗರಾಜ, ನಿರ್ದೇಶಕರಾದ ಕುರಿ ಕರಿಬಸಪ್ಪ, ಕುರುಬರ ಅಂಜೀನಪ್ಪ, ದೇವರುಮನೆ ಯಲ್ಲಪ್ಪ, ವಡ್ಡರ ಜಡೆಪ್ಪ, ಪಿ.ಶಿವರಾಮು, ಗೊಲ್ಲರ ಜಂಬಯ್ಯ, ಎಸ್.ಕೆ.ಬಸವರಾಜ, ಗೌಡ್ರು ಅಂಬಮ್ಮ, ಕುಂಬಾರ ಈರಮ್ಮ, ತಳವಾರ ವೀರೇಶ, ಪಿ.ಶೇಕ್ಅಹ್ಮದ್, ಮುಖ್ಯ ಕಾರ್ಯನಿರ್ವಾಹಕ ಕೆ.ಕೊಮಾರೆಪ್ಪ ಸೇರಿದಂತೆ ಗ್ರಾಮದ ಮುಖಂಡರು, ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು. ಸೆ03ಕಂಪ್ಲಿ ತಾಲೂಕಿನ ದೇವಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆಯಲ್ಲಿ ಸಂಘದ ಸಿಬ್ಬಂದಿ ಲೆಕ್ಕಪತ್ರ ಶುಕ್ರವಾರ ಮಂಡಿಸಿದರು.