ಮಹದಾಯಿ ಕಳಸಾ-ಬಂಡೂರಿ ಅನುಮತಿ ಕೊಡಿಸುತ್ತೇವೆ: ಭರವಸೆ
ಹುಬ್ಬಳ್ಳಿ 13: ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಅನುಮತಿ ಕೊಡಿಸುತ್ತೇವೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಭವಸೆ ನೀಡಿದರು.
ನವಲಗುಂದ ವಿದಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮಕ್ಕೆ ಶ್ರೀಮತಿ ಫಕ್ಕೀರಮ್ಮ ಭ. ದೊಡ್ಡಗಾಣಿಗೇರ ಸರಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಸೇವೆ ಮಾಡಿ ಜನ ಮನ ಗೆದ್ದ ದಿ. ಎಸ್.ಆರ್. ಬೊಮ್ಮಾಯಿ ಅವರ ಪುತ್ಥಳಿ ಅನಾವರಣ ಹಾಗೂ ಸರ್ಕಾರದ ವಿವೇಕ ಯೋಜನೆ ಹಾಗೂ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಬೇಕಾಗುವ ಅನುಮತಿ ಕೊಡಿಸಲು ತಮಗೆ ತೊಂದರೆ ಏನು? ಎಂದು ಕೋನರಡ್ಡಿ ಅವರು ಮಾತನಾಡುತ್ತಾ ಬೊಮ್ಮಾಯಿ ಸಾಹೇಬರು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಧಾರವಾಡದಿಂದ ನವಲಗುಂದ, ರೋಣ, ಗದಗ ಹಾಗೂ ನರಗುಂದ ವರೆಗೆ ಪಾದಯಾತ್ರೆ ಮಾಡಿ ಈ ಯೋಜನೆ ಜಾರಿ ಮಾಡಲು ಸಾಕಷ್ಟು ಹೋರಾಟ ಮಾಡಿದ ಸಂದರ್ಭದಲ್ಲಿ ನಾವೇಲ್ಲರೂ ಬೆಂಬಲಿಸಿದ್ದೆವು ಎಂದು ಕೇಳಿದಾಗ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ನಮಗೂ ಕೂಡ ಇದರ ಬಗ್ಗೆ ಬದ್ಧತೆ ಇದ್ದು ಆದಷ್ಟು ಬೇಗ ಯೋಜನೆ ಜಾರಿಗೆ ಕೇಂದ್ರದಿಂದ ಬೇಕಾಗುವ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು.
ಹೆಬಸೂರ ಗ್ರಾಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಹಾಗೂ ನನಗೆ ವ್ಯಯಕ್ತಿವಾಗಿ ಅವಿನಾಭಾವ ಸಂಬಂಧ ಹೊಂದಿದ್ದು ಕಾರಣ ನನ್ನ ತಂದೆ ಎಸ್.ಆರ್. ಬೊಮ್ಮಾಯಿ ಅವರ ಪುತ್ಥಳಿ ಸ್ಥಾಪಿಸಿ ಅನಾವರಣ ಗೊಳಿಸಿದ್ದಕ್ಕೆ ಈ ಬಾಗದ ಹೀರೀಯರಿಗೆ ಹಾಗೂ ಯುವ ಜನತೆಗೆ ಬಸವರಾಜ ಬೊಮ್ಮಾಯಿ ಕೃತಜ್ಞತೆ ಹೇಳಿದರು.
ಸಭೆಯ ಸಾನಿಧ್ಯವನ್ನು ಹೆಬಸೂರ ಗ್ರಾಮದ ಸಿದ್ದಯ್ಯ ಸ್ವಾಮಿಗಳು ವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಡಾ: ಆರ್.ಬಿ. ಶಿರಿಯಣ್ಣವರ, ಕೆ.ಎಂ.ಎಸ್. ಸದಸ್ಯ ಸುರೇಶ ಬಣವಿ, ಮುಖಂಡರುಗಳಾದ ಗೋಪಣ್ಣ ನಲವಡಿ, ಶಿವಪ್ಪ ಭೂಮಣ್ಣವರ, ವೀರನಗೌಡ ಮರಿಗೌಡ್ರ, ಮೋನಪ್ಪ ಗಡ್ಡಿ, ಸುರೇಶ ಮುದರಡ್ಡಿ, ಚಾಂದುಸಾಬ ನದಾಫ, ರಾಜು ಸಂಕರಡ್ಡಿ, ಮೌಲಾಸಾಬ ಬಳಗಲಿ, ರಾಮಣ್ಣ ಅಮಡ್ಲ, ಗ್ರಾಮ ಪಂಚಾಯತ ಅಧ್ಯಕ್ಷ ಪ್ರವೀಣ ಹಲಗತ್ತಿ, ಕಿರೆಸೂರ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಪಾಟೀಲ, ಗ್ರಾ.ಪಂ. ಸದಸ್ಯರುಗಳು, ಕಾಲೇಜು ಸಮಿತಿ ಅಧ್ಯಕ್ಷ ನಾರಾಯಣ ನಲವಡಿ, ಹಾಗೂ ಕಾಲೇಜು ಸಮಿತಿಯ ಸದಸ್ಯರುಗಳು, ಗ್ರಾಮದ ಮುಖಂಡರುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.