ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ರವಿವಾರ ಮಹಾ ಚಂಡಿಕಾಯಾಗ
ರಾಣೇಬೆನ್ನೂರು :ಜು 19- ಇಲ್ಲಿನ ಮಾರುತಿ ನಗರದ( ವೀರಭದ್ರೇಶ್ವರ ನಗರ ) ಇತಿಹಾಸ ಪ್ರಸಿದ್ಧ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ, ದೇವಿ ಉಪಾಸಕರಾದ ಶ್ರೀ ಯುಧಿಶ್ವರ ಪ್ರಜ್ವಲ್ ಗುರೂಜಿ ಅವರ ನೇತೃತ್ವದಲ್ಲಿ, ಜುಲೈ 21,2024ರ, ರವಿವಾರ ಮುಂಜಾನೆ 7:30 ಗಂಟೆಗೆ, ಕ್ರೋಧಿ ನಾಮ ಸಂವತ್ಸರ ಆಷಾಢ ಮಾಸದ ಹುಣ್ಣಿಮೆ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಶ್ರೀ ಮಹಾ ಚಂಡಿಕಾಯಾಗ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ.
ಪ್ರತಿ ವರ್ಷ ರಾಜ್ಯದ ಬೇರೆ ಬೇರೆ, ಜಿಲ್ಲೆ, ತಾಲೂಕು, ಪ್ರಾಂತ ಪ್ರದೇಶಗಳಲ್ಲಿ ಆಯೋಜಿಸಲಾಗುವ ಈ ಮಹಾ ಚಂಡಿಕಾಯಾಗವು, ಶತ್ರುನಾಶ, ಅನಾರೋಗ್ಯ, ಪೀಡೆ, ವಿವಾಹದಲ್ಲಿ ತಡೆ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಅಶಾಂತಿ, ದುಷ್ಟ ಪ್ರಯೋಗಗಳು, ಇವುಗಳ ನಿವಾರಣೆಗಾಗಿ ಮತ್ತು ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯಪ್ರಾಪ್ತಿ, ಸಂಪತ್ತು ಸಕಲ ಇಷ್ಟಾರ್ಥಗಳ ಸಿದ್ದಿಗಾಗಿ, ನಡೆಸಲಾಗುತ್ತದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಯುಧಿಶ್ವರ ಗುರೂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಮುಂಜಾನೆ 7 ಗಂಟೆಯಿಂದ ಪ್ರಾರಂಭವಾಗುವ ಶ್ರೀ ಮಹಾ ಚಂಡಿಕಾ ಯಾಗವು, ಮಧ್ಯಾಹ್ನ 12 ಗಂಟೆಗೆ ಮಹಾಪೂರ್ಣಾಹುತಿ. ಮತ್ತು ಅಷ್ಟಾವಧಾನ ಸೇವೆ ಸಮರೆ್ಣಯೊಂದಿಗೆ ಸಾಂಗಮಂಗಲಗೊಳ್ಳಲಿದೆ. ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ನಡೆಯಲಿದೆ. ಎಂದಿದ್ದಾರೆ. ದೇವಸ್ಥಾನದಲ್ಲಿ ಪ್ರಥಮವಾಗಿ ಆಯೋಜಿಸಲಾಗಿರುವ ಈ ಲೋಕಕಲ್ಯಾಣಾರ್ಥ ಸಂಕಲ್ಪ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕ, ಭಕ್ತಾದಿಗಳು ಪಾಲ್ಗೊಂಡು, ಧನ್ಯ ಪುನಿತರಾಗುವಂತೆ ಶ್ರೀ ತುಂಗಾಜಲ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶೇಕಪ್ಪ ಹೊಸಗೌಡ್ರು ಮತ್ತು ಪದಾಧಿಕಾರಿಗಳು ಅವರು ತಿಳಿಸಿದ್ದಾರೆ