ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗರ ಸಂಘ ಮನವಿ
ಕಾಗವಾಡ 20: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತಕ್ಷಣ ಒಳ ಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕರ್ನಾಟಕ ಪ್ರದೇಶ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಗಸ್ತಿ ಆಗ್ರಹಿಸಿದ್ದಾರೆ.
ಅವರು, ಸೋಮವಾರ ದಿ.19 ರಂದು ಕರ್ನಾಟಕ ಪ್ರದೇಶ ಮಾದಿಗರ ಸಂಘ ಹಾಗೂ ಜಿಲ್ಲಾ ಆದಿಜಾಂಬವ ಸೇವಾ ಅಭಿವೃದ್ಧಿ ಸಂಘ, ಮಾದಿಗ ಸಂಘಟನೆಗಳ ಒಕ್ಕೂಟಗಳ ಮೂಲಕ ತಹಶಿಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಸಲ್ಲಿಸಿ, ಮಾತನಾಡುತ್ತಾ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಿ, ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಬೇಕು ಎನ್ನುವ ನೀಟಿನಲ್ಲಿ ಸುಮಾರು 30 ವರ್ಷಗಳಿಂದ ಒಳ ಮೀಸಲಾತಿ ಕಲ್ಪಿಸುವಂತೆ ಮಾದಿಗ ಸಮುದಾಯದಿಂದ ನಮ್ಮ ಹೋರಾಟದ ಪರಿಣಾಮ ಸರ್ವೋಚ್ಚ ನ್ಯಾಯಾಲಯ ನ್ಯಾಯ ಒದಗಿಸಿದೆ. ಆದರೆ ಆದೇಶದಂತೆ ಈಗಾಗಲೇ ಆಂದ್ರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಒಳಮೀಸಲಾತಿ ಜಾರಿಗೆ ತಂದಿದ್ದು, ನಮ್ಮ ರಾಜ್ಯ ಸರ್ಕಾರ ಕೂಡ ಒಳ ಮೀಸಲಾತಿ ಜಾರಿಗೆಗೊಳಿಸುವಂತೆ ಆಗ್ರಹಿಸಿದರು.
ಮುಖಂಡರಾದ ಪರಸುರಾಮ ಅವಳೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಜನಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ನಮಗೆ ಯಾವುದೇ ರಿತಿಯ ಸ್ಥಾನ ಮಾನಗಳು ದೊರಕುತ್ತಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರಕಾರ ಕೂಡಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದರು.
ಆದಿಜಾಂಬವ ಸೇವಾ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಹಾದೇವ ಹಾದಿಮನಿ, ರಾಜು ರಾಜಂಗಳೆ, ಸಂತೋಷ ಮಾದರ, ಭರಮು ಮಾದರ, ಬಸು ಮಾಂಗ, ರವಿಂದ್ರ ಮಾದರ, ಮಹೇಶ ಮಾದರ, ವಿನೋದ ಮಾದರ, ಸಂಜಯ ಮಾದರ, ಸಂದೀಪ ಮಾದರ, ಮಹೇಶ ಮಾಂಗ, ಅನೀಲ ಮಾಂಗ, ಸುನೀತಾ ಐಹೊಳೆ, ಪರಶುರಾಮ ಮಾದಿಗ, ಶಂಕರ ಪೂಜಾರಿ, ಅನೀಲ ಮಾದಿಗ, ಕಾಶಿರಾಮ ಮಾದಿಗ, ತುಕಾರಾಮ ಗೊಡಬೊಲೆ, ರಾಜು ಮಾದಿಗ, ದೀಪಕ ದಾವಣೆಕರ ಸೇರಿದಂತೆ ಇತರರು ಇದ್ದರು.