ವಿಜಯಪುರ

ಮಧ್ವಾಚಾರ್ಯರ ದ್ವೈತ ತತ್ವ ದೇಶಾದ್ಯಂತ ಪ್ರಸಾರ: ಪ್ರೊ.ಪಿ.ಜಿ. ತಡಸದ

ಮಧ್ವಾಚಾರ್ಯರ ದ್ವೈತ ತತ್ವ ದೇಶಾದ್ಯಂತ ಪ್ರಸಾರ: ಪ್ರೊ.ಪಿ.ಜಿ. ತಡಸದ

ಲೋಕದರ್ಶನ ವರದಿ 


ವಿಜಯಪುರ 21 :  ಮಧ್ವಾಚಾರ್ಯರು ದ್ವೈತ ತತ್ವವನ್ನು ದೇಶಾದ್ಯಂತ ಪಸರಿಸುವ ಮೂಲಕ ಭಾರತೀಯ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಿಎಂಇಬಿ ನಿರ್ದೇಶಕ ಪ್ರೊ. ಪಿ.ಜಿ. ತಡಸದ ಹೇಳಿದರು.  

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಭಾರತೀಯ ತತ್ವಶಾಸ್ತ್ರದ ಪ್ರಮುಖ ಚಿಂತನಾ ಪರಂಪರೆಗಳಲ್ಲಿ ಒಂದಾಗಿದೆ. ಅವರ ತತ್ವಗಳು ಭಕ್ತಿ, ಧಾರ್ಮಿಕ ಚಿಂತನೆ ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ಸಾರುತ್ತವೆ. ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಧ್ವಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಜಗತ್ತು ಸತ್ಯ, ಎಂಬ ತತ್ವವನ್ನು ಸಾರುತ್ತದೆ. ಶ್ರೀಹರಿಯೇ ಸರ್ವೋತ್ತಮ ಎಂಬ ನಂಬಿಕೆಯೊಂದಿಗೆ ಭಕ್ತಿ ಮತ್ತು ಧರ್ಮದ ಮಹತ್ವವನ್ನು ಅವರು ಪ್ರತಿಪಾದಿಸಿದರು. ಅವರ ತತ್ವಗಳು ಭಾರತೀಯ ಆಧ್ಯಾತ್ಮಿಕ ಚಿಂತನೆಗೆ ಹೊಸ ಆಯಾಮ ನೀಡಿದ್ದು, ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಭಾವ ಬೀರಿವೆ ಎಂದು ಹೇಳಿದರು.  

ಮಧ್ವಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳ ಅಧ್ಯಯನದಿಂದ ಯುವಜನರಲ್ಲಿ ಧಾರ್ಮಿಕ ಅರಿವು, ನೈತಿಕ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಗೌರವ ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಪ್ರೊ.ಜಿ.ಜಿ.ರಜಪೂತ, ಪ್ರೊ.ಓಂಕಾರ ಕಾಕಡೆ, ಪ್ರೊ.ಎಂ.ಪಿ.ಬಳಿಗಾರ, ಪ್ರೊ.ಜ್ಯೋತಿ ಉಪಾಧ್ಯೆ, ಪ್ರೊ.ಶ್ರೀನಿವಾಸ, ಡಾ.ಭಾಗ್ಯಶ್ರೀ ದೊಡಮನಿ, ವಿಜಯಕುಮಾರ ಹಿರೇಮಠ, ಸುರೇಖಾ ಕೇಸ್ಕರ್, ಯಲಗೂರೇಶ ದೇಶಪಾಂಡೆ, ಬಿ.ಕೆ.ಜೋಶಿ, ಜ್ಯೋತಿ ಜೋಶಿ, ಮಧುಮತಿ ಕುಲಕರ್ಣಿ, ದಯಾನಂದ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ