ವಿಜಯಪುರ

ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮ ಮತ್ತು ತುಳಜಾಪುರ ಅಂಬಾಭವಾನಿಯ ಪೂಜಾ ಅಲಂಕಾರ

ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮ ಮತ್ತು ತುಳಜಾಪುರ ಅಂಬಾಭವಾನಿಯ ಪೂಜಾ ಅಲಂಕಾರ



ಕಲಕೇರಿ 21 : ಗ್ರಾಮದ ಅಂಬಾಭವಾನಿ ದೇವಸ್ತಾನದಲ್ಲಿ ದೇವಿಯ ಮೂರ್ತಿಗೆ 10ನೇ ದಿನದಂದು ವಿಶೇಷವಾಗಿ ಸಾಕ್ಷಾತ್ ತುಳಜಾಪುರ ಅಂಬಾಭವಾನಿಯ ಪೂಜಾ ಅಲಂಕಾರದೊಂದಿಗೆ ಆರಾಧಿಸಲಾಯಿತು ಮತ್ತು ದೇವಿ ಉಪಾಸಕರಾದ ಮೋತಿಲಾಲ ಕುಲಕರ್ಣಿ ಅವರ ಸತ್ಯ ಸಂಕಲ್ಪದಂತೆ ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮವನ್ನು ಹಿರೂರ ಹಿರೇಮಠದ ಜಯ ಸಿದ್ಧೇಶ್ವರ ಶಿವಾಚಾರ್ಯರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆಚಾರ್ಯರು ನಡೆಸಿಕೊಟ್ಟರು.


ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ ಕಾರ್ಯ ನಡೆಯಿತು. ಹೋಮದ ಪೂಜೆಯಲ್ಲಿ ಹಿರಿಯರಾದ ಎಸ್‌.ಎಮ್‌.ಕಡಕೋಳ ನಿವೃತ್ತ ಶಿಕ್ಷಕರು, ಶತಾಯುಷಿ ಗುರಮ್ಮ ಎಮ್ ಕಡಕೋಳ, ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪುರ, ವಾಯ್‌. ಬಿ. ಕುಲಕರ್ಣಿ, ಮಡಿವಾಳಪ್ಪ ಜಂಗಾಣಿ ಸೇರಿದಂತೆ ಹಲವಾರು ಸದ್ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ಹವಿಸ್ಸನ್ನು ಅರ​‍್ಿಸಿ ಪ್ರಾರ್ಥನೆಗೈದರು.


ನಂತರ ಹಿರೂರ ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಚಂಡಿ ಹೋಮಕ್ಕೆ ಪೂರ್ಣಾಹುತಿ ನೀಡಲಾಯಿತು. ತಾಯಂದಿರು, ತರುಣರು ಸೇರಿದಂತೆ ಹಲವು ಸದ್ಭಕ್ತರು ದೇವಿಯ ಸೇವಾಧಾರಿಗಳಾಗಿ ಹೋಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ