ವಿಜಯಪುರ

ಎಂ ಎಸ್ ಖೇಡ ಅವರ ಆದರ್ಶಯುತ ಜೀವನ ಪ್ರತಿಯೊಬ್ಬರಿಗೂ ಮಾದರಿ-ಲಾಯಪ್ಪ ಇಂಗಳೆ

ಎಂ ಎಸ್ ಖೇಡ ಅವರ ಆದರ್ಶಯುತ ಜೀವನ ಪ್ರತಿಯೊಬ್ಬರಿಗೂ ಮಾದರಿ-ಲಾಯಪ್ಪ ಇಂಗಳೆ


ವಿಜಯಪುರ 21 : ವಿಜಯಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಂ ಎಸ್ ಖೇಡ ಅವರ 10 ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಂದು ಖೇಡ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಅವರು ಮಾತನಾಡಿ ಎಂ ಎಸ್ ಖೇಡ ಅವರು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ, ದೀನ ದುರ್ಬಲ, ಮತ್ತು ಅಂಗವಿಕಲರಿಗೆ ಶಿಕ್ಷಣ ಕೊಟ್ಟು ಬದುಕು ಕಟ್ಟಿಕೊಟ್ಟಿದ್ದಾರೆ ಅವರ ಆದರ್ಶಯುತ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು. 

ಹೋರಾಟಗಾರ ಅನಿಲ ಇಕ್ಕಡೆ ಅವರು ಮಾತನಾಡಿ ಎಂ ಎಸ್ ಖೇಡ ಅವರು ದೈಹಿಕವಾಗಿ ಅಂಗವಿಕಲರಾಗಿದ್ದರೆ ಹೊರತು ಮಾನಸಿಕವಾಗಿ ಅತ್ಯಂತ ಸದೃಢ ವ್ಯಕ್ತಿಯಾಗಿದ್ದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಖಜಾಂಚಿ  ವಿನೋದ ಎಮ್ ಖೇಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮ ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯನಿರ್ದೇಶಕ  ವಿಕಾಸ ಎಮ್ ಖೇಡ, ಮಾತೋಶ್ರೀ ಅಂಬವ್ವ ಖೇಡ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ ವಿಜಯ, ಲಕ್ಷ್ಮಿ ಹಿಪ್ಪರಗಿ, ಪ್ರಕಾಶ ರುದ್ರಮನಿ, ಅಪ್ಪು ಇಂಡಿ ಅಶೋಕ ವಾಲಿಕಾರ ಎಂ ಬಿ ಉಮರಾಣಿ ಅಂಬಣ್ಣ ಗೊನ್ನಾಪುರ, ಸೀತಾ ಲಮಾಣಿ. ಗೌರು ಉದಂಡೆ, ಶಂಕ್ರಮ್ಮ ಕೋರಿ ಸಂತೋಷ ಕಲಗುಡಿ. ಎಂ ಎಸ್ ಮಠ. ಅನಿಲ್ ಪವಾರ, ರಾಜು ತಡಲಗಿ. ರಾಜು ಕುಮಟಗಿ ಭಗವಾನ, ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ಅಂಗವಿಕಲರ ಒಕ್ಕೂಟ ಸದಸ್ಯರು  ವಿಕಲಚೇತನರು ಉಪಸ್ಥಿತರಿದ್ದರು. 


ಸುದ್ದಿ ಓದಿ