ವಿಜಯಪುರ

ಗಂಗಾಧರ ಕೋರಳ್ಳಿ ಅವರ ಮಹಾಶಕ್ತಿ ಮಂದಿರದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ

ಗಂಗಾಧರ ಕೋರಳ್ಳಿ ಅವರ ಮಹಾಶಕ್ತಿ ಮಂದಿರದಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದ



ವಿಜಯಪುರ 21: ನಗರದ ಇಂಡಿ ರಸ್ತೆಯಲ್ಲಿರುವ ಗೋಕಾಕ ಚಳುವಳಿ ಹೋರಾಟಗಾರ ಗಂಗಾಧರ ಕೋರಳ್ಳಿ ಅವರು ಪ್ರತಿಷ್ಠಾಪಿಸಿರುವ ಮಹಾಶಕ್ತಿ ನಾಡದೇವಿ ಮಂದಿರದಲ್ಲಿ ಮಹಾಶಕ್ತಿ ಉತ್ಸವ ಮಂಡಳಿಯಿಂದ ನವರಾತ್ರಿ ಪ್ರಯುಕ್ತ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕನ್ನಡದ ಕಟ್ಟಾಳು ಗಂಗಾಧರ ಕೋರಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಲಾಯಪ್ಪ ಇಂಗಳೆ, ಮಹಾದೇವಿ ಕೋರಳ್ಳಿ ನೀಲಕಂಠ ಕೋರಳ್ಳಿ, ವೀಣಾ ಕೋರಳ್ಳಿ, ಆದಿತ್ಯ ಕೋರಳ್ಳಿ, ಮೇಘರಾಜ ಖೇತಪಾಲ, ನಿಂಗಣ್ಣ ಮನಗೂಳಿ, ತ್ರಿವೇಣಿ ಮನಗೂಳಿ, ಗೀತಾ ಬಿರಾದಾರ ನಿಹಾರಿಕಾ ಕಲಬುರಗಿ, ಗುರು ಹಿರೇಮಠ, ಸಂಗಮೇಶ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ