ಧಾರವಾಡ - ಹುಬ್ಬಳ್ಳಿ

ಉತ್ತರ ಕರ್ನಾಟಕದ ಧ್ವನಿಗಟ್ಟಿಗೊಳಿಸಲು ಮೋಹನಲಿಂಬಿಕಾಯಿ ಗೆಲ್ಲಿಸಲು ಪದವೀಧರರಿಗೆ ಎಚ್‌.ಕೆ.ಪಾಟೀಲರ ಕರೆ

ಉತ್ತರ ಕರ್ನಾಟಕದ ಧ್ವನಿಗಟ್ಟಿಗೊಳಿಸಲು ಮೋಹನಲಿಂಬಿಕಾಯಿ ಗೆಲ್ಲಿಸಲು ಪದವೀಧರರಿಗೆ ಎಚ್‌.ಕೆ.ಪಾಟೀಲರ ಕರೆ
H.K. Patil calls upon graduates to ensure the victory of Mohan Limbikai, in order to give a voice to

ಲೋಕದರ್ಶನ ವರದಿ 


       ಹುಬ್ಬಳ್ಳಿ 21 : ಉತ್ತರ ಕರ್ನಾಟಕದ ಧ್ವನಿ ಗಟ್ಟಿಗೊಳಿಸಲು ಎಲ್ಲ ಸಾಮರ್ಥ್ಯ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ, ಹಾಗೂ ಶಾಸಕ ಎಚ್‌.ಕೆ.ಪಾಟೀಲರು ಪ್ರಜ್ಞಾವಂತ ಮತದಾರರಿಗೆ ಮನವಿ ಮಾಡಿಕೊಂಡರು.  

ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೋಹನಲಿಂಬಿಕಾಯಿ ಬೆಂಬಲಾರ್ಥ ಮಂಗಳವಾರಕೆ. ಎಚ್‌.ಪಾಟೀಲ ಕಾಲೇಜಿನಲ್ಲಿ ಏರ​‍್ಪಟಟ ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.  

“ ಬಿಜೆಪಿ ವಶದಲ್ಲಿದ್ದ  ಈ ಕ್ಷೇತ್ರವನ್ನು 1984 ರಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸಗೆ ನೀಡಿದಿರಿ.  ಜಾತಿ,ಮತ, ಪಂಥ ಭೇದವಿಲ್ಲದೆ ಚುನಾವಣೆ ಮಾಡಿ ನನಗೆ ಶಕ್ತಿ ತುಂಬಿದಿರಿ. ಉತ್ತರ ಕರ್ನಾಟಕದ ಧ್ವನಿಯಾಗಿ ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲ ನಾಯಕನನ್ನಾಗಿ ಮಾಡಿದಿರಿ. ನಿಮ್ಮ ಋಣ ತೀರಿಸಲಾಗದು ಎಂದರು.  

2008 ರಲ್ಲಿ ಈ ಕ್ಷೇತ್ರವನ್ನು ನಾವುಕಳೆದು ಕೊಂಡೆವು . ಈಗ ಬದಲಾದ ರಾಜಕೀಯ, ಸಾರ್ವಜನಿಕ. ಸಾಮಾಜಿಕ ವಾತಾವರಣದಲ್ಲಿ ಮೋಹನಲಿಂಬಿಕಾಯಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಭಾರಿ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರ ಮರಳಿ ಪಡೆಯಬೇಕೆಂದರು.  

ತಮ್ಮ ಪದವಿಧರರ ಚುನಾವಣೆಯಲ್ಲಿಶ್ರಮಿಸಿದ ಹಿರಿಯರನ್ನುಹಾಗೂ ಹಿತೈಷಿಗಳ ಸೇವೆಯನ್ನು ಸ್ಮರಿಸಿ ಅವರನ್ನು ಕೊಂಡಾಡಿದರು. ಇಂದು ಅದೇ ಮಾದರಿಯಲ್ಲಿ ಕೆಲಸಮಾಡಿ “ಇದು ಲಿಂಬಿಕಾಯಿಅಲ್ಲ ಎಚ್‌.ಕೆ.ಪಾಟೀಲರ ಚುನಾವಣೆ ಎಂದು ತಿಳಿದು ಕೆಲಸ ಮಾಡಬೇಕೆಂದು”ವಿನಂತಿಸಿದರು.  


ಸುದ್ದಿ ಓದಿ