ಹಿರೇಇಂಡಿ ಕೆರೆಗೆ ನೀರು ಬಿಡುವ ಕಾರ್ಯಕ್ಕೆ ಸಂಸದ ರಮೇಶ ಚಾಲನೆ
ಇಂಡಿ: ಹಿರೇಇಂಡಿ ಕೆರೆಗೆ ಬೋರವೆಲ್ ಮತ್ತು ತೆರೆದ ಬಾವಿಗಳಿಗೆ ನೀರು ಹೆಚ್ಚಾಗಲು ಮತ್ತು ಜನ ಜಾನುವಾರುಗಳಿಗೆ ಅನುಕೂಲವಾಗಲು ನೀರು ಬಿಡಲಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಹಿರೇಇಂಡಿ ಕೆರೆಗೆ ನೀರು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ವೀಕ್ಷಣೆ ಮಾಡಿ ಮಾತನಾಡಿದರು.
ಕೆರೆಗೆ ನೀರು ತಿಡಗುಂದಿ ಕಾಲುವೆಯಿಂದ ಹಂಜಗಿ ಕೆರೆಗೆ ಬಂದು ನಂತರ ಹಂಜಗಿ ಕೆರೆಯಿಂದ ಹಳ್ಳದ ಮುಖಾಂತರ ಹಿರೇ ಇಂಡಿ ಕೆರೆಗೆ ನೀರು ಬರುವದು ಮತ್ತು 10 ಎಮ್ ಸಿ ಎಫ್ ಬಿ ನೀರು ನಿಲ್ಲುವದು ಸೇರಿದಂತೆ ಮೂರು ತಿಂಗಳು ನೀರು ನಿಲ್ಲುವದು. ಇದು ಬೇಸಿಗೆಯಲ್ಲಿ ಉಪಯೋಗವಾಗಲಿದೆ ಎಂದು ಜಿಗಜಿಣಗಿ ಹೇಳಿದರು.
ಬಿಜೆಪಿ ವಿಜಯಪುರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಹಿರೇ ಇಂಡಿ ಕೆರೆ ಮಳೆಯಿಂದ ಮಾತ್ರ ಅಲ್ಪಸ್ವಲ್ಪ ನೀರು ಬರುತ್ತಿತ್ತು. ಮತ್ತು ಕೆರೆಯಿಂದ ನೀರು ಬರುತ್ತಿರಲಿಲ್ಲ. ಹೀಗಾಗಿ ಈ ಬಾರಿ ಸಂಸದರ ಪ್ರಯತ್ನದಿಂದ ಕೆರೆ ತುಂಬಲಾಗಿದೆ ಎಂದ ಅವರು ಈ ಕಾರ್ಯದಲ್ಲಿ ಸಹಕಾರ ನೀಡಿದ ಸಂಸದ ಜಿಗಜಿಣಗಿ ಯವರಿಗೆ ರೈತರ ಮತ್ತು ಅಡವಿ ವಸ್ತಿ ಜನರ ಪರವಾಗಿ ಅಭಿನಂದಿಸಿದರು.
ಸಣ್ಣ ನೀರಾವರಿ ಕಾರ್ಯ ನಿರ್ವಾಹಕ ಅಭಿಯಂತರ ಚಂದ್ರಕಾಂತ ಕೆರೂರ, ಸಹಾಯಕ ಅಭಿಯಂತರ ಕೆ.ಎಸ್.ಬಿರಾದಾರ, ಹಣಮಂತ ಹೊಟಗಿ, ಮಲ್ಲಪ್ಪ ಲಾಳಸಂಗಿ, ಬಲವಂತ ಇಂಗಳೆ, ಶ್ರೀಮಂತ ತಾಂಬೆ, ಸಿದ್ರಾಮ ತಾಂಬೆ, ಶಿವಯೋಗಿ ದೇವರ, ಬಾಬು ಸಾವಕಾರ ಹೊಟಗಿ, ಖಾಜಾಸಾಬ ಸಯ್ಯದ, ಕಾಂತು ಚವ್ಹಾಣ ಮತ್ತಿತರಿದ್ದರು.