ಇಂಡಿ

ಅರ್ಜನಾಳ ಕೆರೆಗೆ ಸಂಸದ ರಮೇಶ ಜಿಗಜಣಗಿ ಭೇಟಿ

ಅರ್ಜನಾಳ ಕೆರೆಗೆ  ಸಂಸದ ರಮೇಶ ಜಿಗಜಣಗಿ ಭೇಟಿ


ಇಂಡಿ13:  ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಯತ್ನಿಸುತ್ತಿದ್ದು, ಅರ್ಜನಾಳ ಕೆರೆ ಅಭಿವೃದ್ಧಿ ಮೂಲಕ 46 ಗ್ರಾಮಗಳಿಗೆ  ಬಹು ಹಳ್ಳಿಗಳ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಸಂಸದ ರಮೇಶ ಜಿಗಜಣಗಿ ಹೇಳಿದರು. 

ಅವರು ಶುಕ್ರವಾರ ತಾಲೂಕಿನ ಅರ್ಜನಾಳ ಗ್ರಾಮದ ಕೆರೆಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ಪ್ರಸುತ್ತ ವರ್ಷ ಬೇಸಿಗೆಯಲ್ಲಿ 46 ಗ್ರಾಮಗಳಲ್ಲಿ ಜನರಿಗೆ ಮತ್ತು ಜಾನುವಾರಗಳಿಗೆ ಅನುಕೂಲವಾಗಲು ಅರ್ಜನಾಳ ಕೆರೆಗೆ ಭೀಮಾನದಿ ಯಿಂದ ನೀರನ್ನು ಸಂಗ್ರಹಿಸಲಾಗುತ್ತಿದೆ ಎಂದರು. 

ಇಂಡಿ ಉಪಕಾಲುವೆ 143 ಕಿ.ಮೀ.ರಲ್ಲಿ ಹೆಡವರ್ಕ ನಿರ್ಮಿಸಿ ಕಾಲುವೆಯಿಂದ ಅರ್ಜನಾಳ ಕೆರೆಗೆ ನೀರು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿ ನಂತರ ಶುದ್ಧ ನೀರು ಸಂಗ್ರಹಣ ತೊಟ್ಟಿ ಮತ್ತು ಪಂಪಿನ ಮನೆ ವೀಕ್ಷಿಸಿದರು. 

ಜಿ.ಪಂ. ಎಇಇ ಆರ್‌.ಎಸ್‌. ರುದ್ರವಾಡಿ, ಸಾಹಾಯಕ ಅಭಿಯಂತರು ಎಲ್‌.ಟಿ. ರಾಠೋಡ, ನಿವೃತ್ತಿ ಇಇ ಎಸ್‌.ಜಿ. ಕಗ್ಗೋಡ, ಝಳಕಿ ಗ್ರಾ ಪಂ ಅಧ್ಯಕ್ಷ ಸಣ್ಣಪ್ಪ ತಳವಾರ, ಬಸಗೊಂಡ ಪಾಟೀಲ, ರಾಜು ಮೇತ್ರಿ, ಲಗಮಣ್ಣ ತಳವಾರ, ರಾಘವೇಂದ್ರ ಕಾಪಸೆ, ಶ್ರೀಶೈಲ ಬಿರಾದಾರ, ರವಿ ಹೂಗಾರ, ಸಿದ್ದು ಮೇತ್ರಿ, ಸುರೇಶ ಬಿರಾದಾರ ಇತತರು ಇದ್ದರು. 


ಸುದ್ದಿ ಓದಿ