ಹೂವಿನ ಹಡಗಲಿ

ಎಂ ಪಿ ಪ್ರಕಾಶ್ ನೆನಪಲ್ಲಿ ವರ್ಷಕೊಮ್ಮೆ ನಾಟಕೋತ್ಸವ

ಎಂ ಪಿ ಪ್ರಕಾಶ್ ನೆನಪಲ್ಲಿ ವರ್ಷಕೊಮ್ಮೆ ನಾಟಕೋತ್ಸವ

ಎಂ ಪಿ ಪ್ರಕಾಶ್ ನೆನಪಲ್ಲಿ ವರ್ಷಕೊಮ್ಮೆ ನಾಟಕೋತ್ಸವ

ಹೂವಿನ ಹಡಗಲಿ 25: ಸಾಂಸ್ಕೃತಿಕ ರಾಯಭಾರಿ ಎಂ ಪಿ ಪ್ರಕಾಶ್ ನೆನಪಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ವರ್ಷಕೊಮ್ಮೆ ನಾಟಕೋತ್ಸವ ಆಯೋಜಿಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ ಪಿ ಎಂ ಅಶೋಕ್ ಹೇಳಿದರು.ಪಟ್ಟಣದ ಗಂಗಾವತಿ ಭಾಗ್ಯಮ್ಮ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಗುರುವಾರ ಸರ್ಕಾರಿ ನೌಕರರ ಸಂಘ, ಜಿ ಬಿ ಆರ್ ಕಾಲೇಜು, ರಂಗ ಒಕ್ಕಲು, ಸ್ವರದೇಸಿ ವತಿಯಿಂದ ಆಯೋಜಿಸಿದ್ದ "ತಿಂಡಿಗೆ ಬಂದ ತುಂಡೇರಾಯ" ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು.ಎಂ ಪಿ ಪ್ರಕಾಶ್ ರವರು ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ರಂಗಭೂಮಿ ಬೆಳವಣಿಗೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಎಂ ಸರ್ಕಾರಿ ನೌಕರರು ತಮ್ಮ ಅನೇಕ ಕೆಲಸಗಳ ಒತ್ತಡದ ನಡುವೆ ಸದಭಿರುಚಿಯ ನಾಟಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.ಜಿ ಬಿ ಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ ಮೋಹನ್ ರೆಡ್ಡಿ ನಾಟಕಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎಂದರು.ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ, ಖಜಾಂಚಿ ಡಿ ವೀರಣ್ಣ ನಾಯ್ಕ್‌ ಇತರರು ಉಪಸ್ಥಿತರಿದ್ದರು. 

ದಾನಪ್ಪ ಎಸ್,ಕೆ ಎಂ ಶಶಿಧರ, ಅಜಯ್ ಚಲುವಾದಿ ಸುರೇಶ ಅಂಗಡಿ, ನಿರ್ವಹಿಸಿದರು.ಮನೋಜ್ಞವಾಗಿ ಮೂಡಿಬಂದ"ತಿಂಡಿಗೆ ಬಂದ ತುಂಡೇರಾಯ"ಪ್ರಕಾಶ್ ರಾಜ್ ರವರ ನಿರ್ದಿಗಂತ ತಂಡದ ಜರ್ಮನ್ ನಾಟಕಕಾರ ಬ್ರೆಕ್ಟ್‌ ನ" ದಿ ರೆಸಿಟಿಬಲ್ ರೈಸ್ ಆಫ್ ಆರ್ತು ಯಿ"ನಾಟಕದ ಕನ್ನಡದ ರೂಪಾಂತರ ನಾಟಕ ಶಕೀಲ್ ಅಹ್ಮದ್ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮನೋಜ್ಞವಾಗಿ ಮೂಡಿಬಂತು.ಸಿದ್ದಪ್ಪ ಮಾದರ, ಮಂಜುನಾಥ ವನಕೇರಿ, ಪಂಪನಗೌಡ ಸಿಂಧನೂರು, ಹನುಮಂತ ನಾಯ್ಕರ್, ಸಂಭ್ರಮ ಸೊನ್ನದ, ರೇಣುಕಾ ವೈ ಕೆ, ಗಣಪತಿ ಗೌಡ ಹೊನ್ನಾವರ, ಹನುಮಂತ ಜಿ ಟಿ, ಯಲ್ಲಪ್ಪ ಹೆಳವರ ಉತ್ತಮವಾಗಿ ನಟಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.ವರ್ತಮಾನದ ವಿದ್ಯಮಾನಗಳುನಾಟಕದಲ್ಲಿ ಅನಾವರಣಗೊಂಡವು. ಒಂದು ಉತ್ತಮ ನಾಟಕ ವೀಕ್ಷಿಸಿದ ರಂಗಾನುಭಾವ ಪ್ರೇಕ್ಷರದ್ದಾಗಿತ್ತು. 


ಸುದ್ದಿ ಓದಿ