ಎಂಓಬಿ. ಅಪರಾಧಿಗಳಿಗೆ ಪರೇಡ್
ಗುಳೇದಗುಡ್ಡ 24: ಸುಮಾರು ವರ್ಷಗಳ ಹಿಂದಿನಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಗುಳೇದಗುಡ್ಡ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಂ.ಓ.ಬಿ. ಅಪರಾಧಿಗಳನ್ನು ಠಾಣೆಗೆ ಕರೆಯಿಸಿ ಅಪರಾಧ ವಿಭಾಗದ ಪಿಎಸ್‌ಐ ಚಂದ್ರಶೇಖರ ಕಿರಶ್ಯಾಳ ಗುರುವಾರ ಪರೇಡ್ ತೆಗೆದುಕೊಂಡರು.
ಅವರು ಗುರುವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯ ಈ ಹಿಂದೆ ಕಾನೂನುಬಾಹೀರ ಕೃತ್ಯವೆಸಗಿದ ಸುಮಾರು 18 ಜನ ಎಂಓಬಿ ಅಪರಾಧಿಗಳನ್ನು ಕರೆಯಿಸಿ, ರೌಡಿ ಪರೇಡ ನಡೆಸಿದ ಸಂದರ್ಭದಲ್ಲಿ ಮಾತನಾಡಿ, ತಾಲೂಕಾ ವ್ಯಾಪ್ತಿಯಲ್ಲಿ ತಮ್ಮಿಂದ ಯಾವುದೇ ರೀತಿಯಲ್ಲಿ ಇನ್ನುಮುಂದೆಯೂ ಅಶಾಂತಿ ಕೃತ್ಯಗಳು, ಕಾನೂನುಬಾಹೀರ ಚಟುವಟಿಕೆಗಳು ನಡೆಯಬಾರದು. ಸಮಾಜದ ಸ್ವಾಸ್ಥ್ಯ ಹದಗೆಡದಂತೆ ನಡೆದುಕೊಳ್ಳಬೇಕು. ಹಾಗೇನಾದರೂ ಕಂಡು ಬಂದರೆ ಮತ್ತೇ ಕಾನೂನುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸೈಐ ಸಿದ್ದಣ್ಣವರ್, ಆನಂದ ಮನ್ನಿಕಟ್ಟಿ ಹಾಗೂ ಇತರರು ಇದ್ದರು.