ಕಾಗವಾಡ

ಕುಂದು ಕೊರತೆಗಳ ಸಭೆ: ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ

ಕುಂದು ಕೊರತೆಗಳ ಸಭೆ: ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ

ಸ್ಥಳದಲ್ಲೇ ಕೆಲ ಸಮಸ್ಯೆಗಳಿಗೆ ಪರಿಹಾರ, ಶಾಸಕರಿಂದ ಕೆಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ 

ಕಾಗವಾಡ 25: ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶ್ರೀಮಂತ ಪಾಟೀಲರಿಂದ ಸಾರ್ವಜನಿಕರ ಕುಂದು ಕೊರತೆಗಳ ಆಲಿಕೆ ಸಭೆ ಜರುಗಿತು. 

ಸೋಮವಾರ ಬೆಳಗ್ಗೆ ಶೇಡಬಾಳದ ಬಸವೇಶ್ವರ ಮಂದಿರದ ಸಭಾಭವನದಲ್ಲಿ ಶಾಸಕ ಶ್ರೀಮಂತ ಪಾಟೀಲರು ಸಾರ್ವಜನಿಕರ ಕುಂದು ಕೊರತೆಗಳು ಆಲಿಸಿದರು. ಸಭೆಯಲ್ಲಿ ಸಾರ್ವಜನಿಕರು ಅನೇಕ  ಸಮಸ್ಯೆಗಳನ್ನು ಮಂಡಿಸಿದರು. ಅದರಲ್ಲಿ ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಿಲ್ಲ, ಪಶು ಚಿಕಿತ್ಸಾಲಯದಲ್ಲಿ ವೈದ್ಯರೇ ಇಲ್ಲ, ರೈತರಿಗೆ ಸಂಪರ್ಕಿಸಲು ತೋಟದ ರಸ್ತೆಗಳು ಕೊರತೆೆ, ಸ್ಮಶಾನ ಭೂಮಿಗಳಲ್ಲಿನ ಅವ್ಯವಸ್ಥೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಸಂಪರ್ಕಿಸುತ್ತಿಲ್ಲ. ಸರ್ಕಾರದಿಂದ ಬರುವ ಯೋಜನೆಗಳ ಮಾಹಿತಿ ದೊರೆಯುತ್ತಿಲ್ಲ ಎಂಬ ಅನೇಕ ಸಮಸ್ಯೆಗಳ ಸುರಿಮಳೆಯನ್ನೇ ಸಾರ್ವಜನಿಕರು ಶಾಸಕರ ಮುಂದೆ ಸುರಿಸಿದರು.  

ಶ್ರೀಮಂತ ಪಾಟೀಲರು ಮಾತನಾಡುತ್ತ ಶೇಡಬಾಳದಲ್ಲಿ ಆಯೋಜಿಸಿದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ನಿಮ್ಮ ಎಲ್ಲ ವಿಚಾರಗಳನ್ನು ಮಂಡಿಸಿದಿರಿ. ಈ ವಿಚಾರಗಳಿಗೆ ಮತ್ತು ಬೇಡಿಕೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಕೆಲ ಸಮಸ್ಯೆಗಳು ಈಡೇರಿಸಿದ್ದಾರೆ. ಇನ್ನುಳಿದ ಸಮಸ್ಯೆಗಳು ಕೂಡಲೇ ಸ್ಪಂದಿಸಿ ನಿಮ್ಮ ಬೇಡಿಕೆಗಳು ಈಡೇರಿಸುತ್ತಾರೆ ಎಂದು ಭರವಸೆ ನೀಡಿದರು. ಕೆಲ ಇಲಾಖೆ ಅಧಿಕಾರಿಗಳು ಪ್ರತಿಯೊಂದು ತಿಂಗಳಿನ ಕೆಲ ದಿನಗಳು ಮೀಸಲಿಟ್ಟು ದೊಡ್ಡ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕು ಎಂದು ಆದೇಶ ನೀಡಿದರು. ರಸ್ತೆ ನಿರ್ಮಾಣಕ್ಕೆ ಹಂತ-ಹಂತವಾಗಿ ಅನುದಾನ ನೀಡುವದಾಗಿ ಭರವಸೆ ನೀಡಿದರು. 

ಕಾಗವಾಡ ಸಿಡಿಪಿಯು ಸಂಜಿವಕುಮಾರ್ ಸದಲಿಗೆ ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತರ ಪರವಾಗಿ ತಮ್ಮ ಬೇಡಿಕೆಗಳನ್ನು ಇಟ್ಟು ಅಂಗನವಾಡಿ ಕೋಣೆಗಳಲ್ಲಿ ಕೆಲವು ಡಾಕ್ಯುಮೆಂಟ್ಸ್‌ಗಳನ್ನು ಭದ್ರವಾಗಿಡಲು ಲಾಕರ್‌ಗಳ ಅವಶ್ಯಕತೆ ಇದೆ ಎಂದು ಕೇಳಿದಾಗ ಪಟ್ಟಣ ಪಂಚಾಯಿತಿ ಅಧಿಕಾರಿ ಮಹೇಶ ಕೊಲ್ಲಾಪುರೆ ಇವರು ಇದರ ವ್ಯವಸ್ಥೆ ಮಾಡುದಾಗಿ ಭರವಸೆ ನೀಡಿದರು. 

ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಇಲ್ಲಿಯ ಸಾರ್ವಜನಿಕರ ಕುಂದು ಕೊರತೆಗಳು ಆಲಿಸಿ ಸ್ಥಳದಲ್ಲಿ ಪರಿಹಾರ ನೀಡಿದರು. 

ಶೇಡಬಾಳದಲ್ಲಿ ಸಾರ್ವಜನಿಕ ಆಸ್ಪತ್ರೆ ಇಲ್ಲ ಎಂದು ಸಾರ್ವಜನಿಕರು ಕೇಳಿ ತಮ್ಮ ಆಕ್ರೋಶ ಹೊರ ಹಾಕಿದ್ದರಿಂದ ತಾಲೂಕ ಆರೋಗ್ಯ ಅಧಿಕಾರಿ ಡಾ. ಬಸಗೌಡ ಕಾಗೆ ಇವರು ಇದರ ಪ್ರಸ್ತಾವನೆ ರಾಜ್ಯದ ಆರೋಗ್ಯ ಇಲಾಖೆಗೆ ಕಳಿಸಲಾಗಿದೆ. ಸ್ಥಳದ ಅವಕಾಶ ಮಾಡಿದರೆ ಆಸ್ಪತ್ರೆ ಮಂಜುರಾಗುತ್ತಿದೆ ಎಂದು ಹೇಳಿದರು. 

ಶೇಡಬಾಳದ ಹಿರಿಯರಾದ ಎಂ.ಎ.ಗಣಿ, ಶುಭಾಶ ಡಾಲೆ, ಭರತೇಶ್ ಪಾಟೀಲ್, ರಾಜು ನಾಂದ್ರೆ, ರಾಜು ಚೌಗುಲೆ, ಉತ್ಕರ್ಷ ಪಾಟೀಲ್, ಕಿರಣ್ ಏದಂಗೌಡರ್ ಸೇರಿದಂತೆ ಇನ್ನುಳಿದ ಚುನಾಯಿತ ಸದಸ್ಯರು ಸಾರ್ವಜನಿಕರು ಇಲ್ಲಿಯ ಕುಂದು ಕೊರತೆಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ತಾಲೂಕ ಪಂಚಾಯತಿ ಅಧಿಕಾರಿ ವೀರಣಗೌಡ ಎಗಣಗೌಡರ, ಹೆಸ್ಕಾಂ ಇಲಾಖೆ ಅಧಿಕಾರಿ ಎಂ.ಬಿ.ಮಾಳಿ, ಜಿಲ್ಲಾ ಪಂಚಾಯಿತಿ ಅಧಿಕಾರಿ ವೀರಣ್ಣಾ ವಾಲಿ, ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಂಗಾಧರ್, ಸೇರದಂತೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ