ಇಂಡಿ

ಮೆಗಾ ಮಾರುಕಟ್ಟೆ ಕಾಮಗಾರಿಯನ್ನು ಪರೀಶೀಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ಮೆಗಾ ಮಾರುಕಟ್ಟೆ ಕಾಮಗಾರಿಯನ್ನು ಪರೀಶೀಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ08:  ಇಂಡಿಯ  ಅತಿ ಸುಂದರವಾದ ಸುಸಜ್ಜಿತವಾದ ಗುಣಮಟ್ಟದಿಂದ ಕೂಡಿದ ಮಿನಿ ವಿಧಾನ ಸೌಧ ಪ್ರಖ್ಯಾತ ಪಡೆದಿದೆ. ಬೇರೆ ಬೇರೆ ಸ್ಥಳಗಳಿಂದ ಬಂದು ಜನರು ವಿಕ್ಷಣೆಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ . ಅಂತಹದೆ ಗುಣಮಟ್ಟದಿಂದ ತಯಾರಿಸಲ್ಪಡುವ ಬೃಹತಾಕಾರದ ಮೆಗಾ ಮಾರುಕಟ್ಟೆಯು ಕೂಡಾ ಒಳ್ಳೆಯ ಗುಣಮಟ್ಟದಿಂದ ಕೂಡಿರಬೇಕು ಎಂಬುದು ನನ್ನ ಉದ್ದೇಶ ಕಳೆದ ಬಾರಿ ರಸ್ತೆ ಅಗಲಿಕರಣದಲ್ಲಿ ವ್ಯಾಪಾರಸ್ಥರು ತುಂಬಾ ತೊಂದರೆಯಲ್ಲಿ ಸಿಲುಕಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದು ಕೂಡ  ಗಮನಿಸಿದ್ದೆನೆ. ಅವರೆಲ್ಲರಿಗೂ ಇಲ್ಲಿ ಉದ್ಯೊಗ ಮಾಡಲು ಅವಕಾಶ ಕಲ್ಪಿಸಿದ್ದೆನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ನಗರದ ದಾದಾಗೌಡ ವೃತ್ತದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಮೆಗಾ ಮಾರುಕಟ್ಟೆ ಕಾಮಗಾರಿಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳೊಂದಿಗೆ ಪರೀಶೀಲನೆ ಮಾಡಿದರು.  

ಅಂದಾಜು ಮೂತ್ತ 30ಕೋಟಿ ರೂ, ಮೂರು ಮಹಡಿ ಹೊಂದಿದೆ 224 ಮಳಿಗೆಗಳಿವೆ ಅದರಂತೆ 224ಜನ ಉದ್ಯೋಗಿಗಳಿಗೆ ವಿವಿದ ವ್ಯಾಪಾರ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನಗರದ ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾಗಿರುವುದರಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಗಬೇಕು ಎಂದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.  

ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ, ಅಭಿಯಂತರರು ವಿಜಯಪುರದ ವಿಠ್ಠಲ  ಟಂಕಸಾಲಿ, ಗುತ್ತಿಗೆದಾರ ಅರುಣ ಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರು ಡಂಬಳ,   ಇಂಜನಿಯರ್ ಅಶೋಕ ಚಂದನ, ಪುರಸಭೆ ಸದಸ್ಯ ಅಸ್ಲಾಮ ಕಡಣಿ, ಹಿರೇರೂಗಿ ಗ್ರಾಮ ಪಂ ಮಾಜಿ ಅಧ್ಯಕ್ಷ ಜಟ್ಟೆಪ್ಪ ಮರಡಿ, ಮೂದಲದವರು ಉಪಸ್ಥಿತರಿದ್ದರು. 

08 ಇಂಡಿ 05: ಪಟ್ಟಣದಲ್ಲಿ ಕಟ್ಟುತ್ತಿರುವ ಮೇಗಾ ಮಾರ್ಕೆಟ ಕಾಮಗಾರಿ ಶಾಸಕ ಯಶವಂತರಾಯಗೌಡ ಪಾಟೀಲರು ವೀಕ್ಷಿಸಿದರು. 


ಸುದ್ದಿ ಓದಿ