ರಾಣೆಬೆನ್ನೂರ

ಮನರೇಗಾ ಕಾಮಗಾರಿ ಸ್ಥಳಕ್ಕೆ ಶಾಸಕ ಯು ಬಿ ಬಿ ಬಣಗಾರ್ ಭೇಟಿ

ಮನರೇಗಾ ಕಾಮಗಾರಿ ಸ್ಥಳಕ್ಕೆ ಶಾಸಕ ಯು ಬಿ ಬಿ ಬಣಗಾರ್ ಭೇಟಿ

ರಾಣೇಬೆನ್ನೂರು 11: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವ ಕೆರೆ  ಹೂಳು ತೆಗೆಸುವ ಕಾಮಗಾರಿ ಸ್ಥಳಕ್ಕೆ  ಶಾಸಕ ಯು, ಬಿ, ಬಣಕಾರ್  ಭೇಟಿ ನೀಡಿ ಕಾರ್ಮಿಕರ ಆಹವಾಲು ಆಲಿಸಿ  ಬರಗಾಲ ಸಂದರ್ಭದಲ್ಲಿ ಮಣ್ಣು ನೀರು ಸಮರಕ್ಷಣೆಗಾಗಿ ಕಾರ್ಮಿಕರಿಗೆ ಕಡ್ಡಾಯವಾಗಿ 100 ದಿನ ಕೆಲಸ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುವರಿ ಮಾನವ ದಿನ ನೀಡುವಂತೆ ಸರಕಾರ ಪ್ರಸ್ತಾವನೆ ನೀಡಲು ಸರಕಾರ ನಿರ್ಧಾರಿಸಿದ್ದು, ಯಾವುದೇ ಕಾರಣಕ್ಕೂ ಕಾರ್ಮಿಕರಿಗೆ ಸಕಾಲಕ್ಕೆ ಕೆಲಸದ ಅನುಕೂಲ ಮಾಡುತ್ತೇವೆ ಎಂದು ತಿಳಿಸಿದರು.  

ಮಹಾತ್ಮ ಗಾಂಧೀಜಿ ಜಿಲ್ಲಾ ಕೂಲಿ ಕಾರ್ಮಿಕರ ಸಂಘಟನೆ ಹಿರೇಕೆರೂರ ತಾಲೂಕಿನ ಕಾರ್ಮಿಕರ ಸಭೆ ಕೂಡಲೇ ಕರೆಯುವಂತೆ ತಾಲೂಕ ಕಾರ್ಯ ನಿರ್ವಾಹಕರಿಗೆ ಸೂಚಿಸಿದರು. ಇತ್ತೀಚಿಗೆ ಕಚವಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಕುಟುಂಬಕ್ಕೆ ಉದ್ಯೋಗ ಖಾತ್ರಿ ಅಡಿಯಲ್ಲಿ ಪರಿಹಾರ ಬಿಡುಗಡೆ ಮಾಡಲು ಸಿಇಓ ಜಿಲ್ಲಾ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು, ಇದೆ ಸಂದರ್ಭದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷ  ಲಲಿತವ್ವ ಬಾರ್ಕಿ, ತಾಲೂಕ ಕಾರ್ಯನಿರ್ವಾಹಕ ಶಶಿಧರ್, ಜಿಲ್ಲಾ ಕಾರ್ಮಿಕರ ಸಂಘಟನೆಯ ಮದಾ ರಸಬ್ ಹಿರೇಹಳ್ಳಿ, ಮಂಜು ಛಲವಾದಿ, ಕಮಲಮ್ಮ ಹರಿಜನ, ಶಾರುಖ್ ಖಾನ್, ಪಠಣ, ಮೇಘಾ ಮುಲಿ ಮನಿ, ಪಂಚಾಯತ್ ಅಭಿರುದ್ದಿ ಅಧಿಕಾರಿ, ಪಂಚಾಯತ್ ಚುನಾಯಿತಾ ಪ್ರತಿನಿಧಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ