ಕಾಗವಾಡ

ಸಿಹಿ ತಿಂಡಿಗಳನ್ನು ತಯಾರಿಸುವ ಸ್ಥಳಕ್ಕೆ ಶಾಸಕ ಶ್ರೀಮಂತ ಪಾಟೀಲ ಭೇಟಿ: ವೀಕ್ಷಣೆ

ಸಿಹಿ ತಿಂಡಿಗಳನ್ನು ತಯಾರಿಸುವ ಸ್ಥಳಕ್ಕೆ ಶಾಸಕ ಶ್ರೀಮಂತ ಪಾಟೀಲ ಭೇಟಿ: ವೀಕ್ಷಣೆ

ಕಾಗವಾಡ 23: ನಮ್ಮ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಪ್ರತಿವರ್ಷದ ಕಾಲಾವಧಿಯಲ್ಲಿ ಮರಣಹೊಂದಿದ ನೊಂದ ಕುಟುಂಬಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸದೇ ಇರುವುದರಿಂದ ಆ ನೊಂದ ಕುಟುಂಬಸ್ಥರೊಂದಿಗೆ ಹಾಗೂ ಮುಸ್ಲಿಂ ಸಮಾಜದ ಬಾಂಧವರೊಂದಿಗೆ ಹಲವಾರು ವರ್ಷಗಳಿಂದ ಕಾಗವಾಡ ಶಾಸಕರು ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ದೀಪಾವಳಿಯ ಸಿಹಿಯನ್ನು ವಿತರಿಸಿ, ಅವರೊಂದಿಗೆ ದೀಪಾವಳಿಯ ಹಬ್ಬವನ್ನು ಆಚರಿಸುತ್ತಿದ್ದಾರೆ. 

ಸಿಹಿಯನ್ನು ತಯಾರಿಸುವ ಸ್ಥಳಕ್ಕೆ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭೇಟಿ ನೀಡಿ, ಸಿಹಿ ತಿಂಡಿಗಳನ್ನು ವೀಕ್ಷಣೆ ಮಾಡಿ, ಶ್ರೀಮಂತ್ ಪಾಟೀಲ್ ಫೌಂಡೇಶನ್‌ನ ಸದಸ್ಯರಿಗೆ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ನೊಂದ ಕುಟುಂಬಗಳಿಗೆ ವಿತರಿಸಬೇಕೆಂದು ಸೂಚನೆ ನೀಡಿದರು.ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಶಾಂತ ಶ್ರೀಮಂತ ಪಾಟೀಲ, ಮುಖಂಡರಾದ ದಾದಾಗೌಡ ಪಾಟೀಲ, ರಾಜೇಂದ್ರ ಪೋತದಾರ, ಮನೋಜ ಕುಸನಾಳೆ, ಬಸಗೌಡ ಪಾಟೀಲ, ವಿನಾಯಕ ಪಾಟೀಲ ಹಾಗೂ ಮತ್ತಿತರ ಮುಖಂಡರು ಕಾರ್ಖಾನೆಯ ಅಧಿಕಾರಿ ವರ್ಗದವರು, ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ