ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮಲಿಂಗಪ್ಪ ಚಾಲನೆ
ಸಿರುಗುಪ್ಪ29: ನಗರದ 24ನೇ ವಾರ್ಡಿನಲ್ಲಿ ನಗರೋತ್ಥಾನ ಯೋಜನೆ ಅಡಿ 2.56 ಕೋಟಿ ವೆಚ್ಚದಲ್ಲಿ ಬಿಟಿ ಮುಖ್ಯ ರಸ್ತೆ ಮತ್ತು ಕೊರಮ್ಮನ ಹಳ್ಳಕ್ಕೆ ತಡೆಗೋಡೆ ಹಾಗೂ ಅಂಕಲಿಮಠದಿಂದ ಬುಜ್ಜಿ ರೈಸ್ ಮಿಲ್ ವರೆಗೆ ಡಾಂಬರೀಕರಣ ರಸ್ತೆ ನಿರ್ಮಾಣ ಕಾರ್ಯಕ್ಕೆ ಕಾಮಗಾರಿ ಚಾಲನೆಯನ್ನು ಶಾಸಕ ಎಂ ಎಸ್ ಸೋಮಲಿಂಗಪ್ಪ ನೆರವೇರಿಸಿದರು.ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಕೆ ವೆಂಕಟರಾಮ ರೆಡ್ಡಿ, ಮಾಜಿ ಸದಸ್ಯ ಸುಳುವಾಯಿ ಮಲ್ಲಿಕಾರ್ಜುನ, ಸದಸ್ಯ ಮೇಕೆಲಿ ವೀರೇಶ, ಮಂಡಿಗಿರಿ ಕೃಷ್ಣ, ಎಂ ಎಸ್ ಸಿದ್ದಪ್ಪ, ಮಹಾದೇವ, ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಇದ್ದರು.