ಕಾಗವಾಡ

ಪಜಾಪಂ ಸಮಾವೇಶಕ್ಕೆ ತೆರಳಲು ಶಾಸಕ ಶ್ರೀಮಂತ ಬಸ್ ವ್ಯವಸ್ಥೆ

ಪಜಾಪಂ ಸಮಾವೇಶಕ್ಕೆ ತೆರಳಲು ಶಾಸಕ ಶ್ರೀಮಂತ ಬಸ್ ವ್ಯವಸ್ಥೆ

ಕಾಗವಾಡ 28: ಬೆಂಗಳೂರಿನಲ್ಲಿ ಜರುಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಗವಾಡ ವಿಧಾನಸಭಾ ಮತದಾರ ಸಂಘದಿಂದ ನೂರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಅವರಿಗೆ ಶಾಸಕ ಶ್ರೀಮಂತ ಪಾಟೀಲರ ವತಿಯಿಂದ ಅಧಿವೇಶನಕ್ಕೆ ಉಪಸ್ಥಿತಿ ಇರಲು ಬಸ್ ವ್ಯವಸ್ಥೆ ಹಾಗೂ ಇನ್ನಿತರ ಸಹಕಾರ ನೀಡಿ ಅವರನ್ನು ಬೀಳ್ಕೊಡಲಾಯಿತು. 

ಕಾಗವಾಡ ಮತಕ್ಷೇತ್ರದಿಂದ ಸಮಾವೇಶಕ್ಕೆ ತೆರಳುತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮಾಜದ ಬಾಂಧವರಿಗೆ ಶಾಸಕರು ಅವರ ಶ್ರೀಮಂತ ಪಾಟೀಲ್ ಫೌಂಡೇಶನ್ ವತಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇವತ್ತು ಉಗಾರ ಖುರ್ದ್‌ ಪಟ್ಟಣದ ಶಾಸಕರ ಜನ ಸಂಪರ್ಕ ಕಾರ್ಯಾಲಯದಿಂದ ಉಗಾರ ಖುರ್ದ್‌ ಪುರಸಭೆಯ ಸದಸ್ಯರು ಮತ್ತು ಶಾಸಕರ ಆಪ್ತಸಹಾಯಕರು ಸಮಾಜದ ಬಾಂಧವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. 

ಪುರಸಭೆ ಸದಸ್ಯರಾದ ಪ್ರಫುಲ್ ಥೋರೂಶೆ, ವಿಜಯ್ ಫರಾಕಟೆ,್ಟ ಯೋಗೇಶ್ ಕುಂಬಾರ್, ಶಾಸಕರ ಆಪ್ತ ಸಹಾಯಕ ವಿನಾಯಕ್ ಶಿಂದೆ, ಸುಭಾಷ್ ಕುರಾಡೆ, ಪ್ರತಾಪ್ ಜಾತ್ರಾಟೆ, ಮುದು ಮೂಲ್ಲಾ, ನಾಯಕ ಬಂಧುಗಳು ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ