ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ
ಶೇಡಬಾಳ : ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲರು ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಶುಕ್ರವಾರ ದಿ. 25 ರಂದು ಶೇಡಬಾಳ ಸ್ಟೇಷನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅರಗ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದರು. ಅದರಂತೆ ಐನಾಪೂರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುಮಾರು 3 ಕೋಟಿ ರೂ. ವೆಚ್ಚದ ಐನಾಪೂರ-ಮೋಳೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಗವಾಡ ವಿಧಾನ ಸಭಾ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದ್ದು ಇಲ್ಲಿಯವರೆಗೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳಿಗೆ ಒತ್ತು ನೀಡಬೇಕು. ಒಂದು ವೇಳೆ ಕಳಪೆ ಮಟ್ಟದ ಕಾಮಗಾರಿ ಕೈಗೊಂಡಿದ್ದೆ ಆದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ರಸ್ತೆ ಸುಧಾರಣೆ, ಒಳಚರಂಡಿ, ಸಮುದಾಯ ಭವನ, ಶ್ರೀ ಬಸವೇಶ್ವರ ಯಾತ ನೀರಾವರಿ ಯೋಜನೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಶೇಡಬಾಳ ಪಪಂ ಮುಖ್ಯಾಧಿಕಾರಿ ಎಂ.ಎಸ್.ಕವಲಾಪೂರೆ, ಮುಖಂಡರಾದ ಭರತೇಶ ಪಾಟೀಲ, ಅಶ್ವಥ ಪಾಟೀಲ, ಕಿರಣ ಯಂದಗೌಡರ, ನಿಖೇತನ ಸಂಗೋರಾಮ, ಸಚೀನ ವಸವಾಡೆ, ಸಂದೀಪ ಸಾಳುಂಕೆ, ಮಯೂರ ಪಾಟೀಲ, ರಾಮು ಸೊಡ್ಡಿ, ಪಪಂ ಸದಸ್ಯರಾದ ಉತ್ಕರ್ಷ ಪಾಟೀಲ, ಸಚೀನ ಜಗತಾಪ, ಬಾಬು ಐನಾಪೂರೆ, ರಾಜು ಕುಸನಾಳೆ, ವಿಠ್ಠಲ ಚೋಳಕೆ, ಕುಮಾರ ಮಾಕನ್ನವರ, ಮಹಾವೀರ ಲಗಾರೆ, ಚಂದು ಜಾಧವ, ಪ್ರವೀಣ ಕೆಂಪವಾಡೆ, ತುಕಾರಾಮ ಹೊನಕಾಂಬಳೆ, ಪ್ರವೀಣ ಪಾಟೀಲ, ಸೌರಭ ಕೋಳಿ, ಅಣ್ಣಾಸಾಬ ನಾಂದ್ರೆ, ಅನಿಲ ಶಿರಕೆ, ವಿಶಾಲ ಘಾಟಗೆ, ಹಣಮಂತ ಚೋಳಕೆ, ಸನ್ಮತಿ ಪಾಟೀಲ, ವಿಜು ಚೋಳಕೆ ಸೇರಿದಂತೆ ಅನೇಕರು ಇದ್ದರು.
ಶೇಡಬಾಳ ಸ್ಟೇಷನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅರಗ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡುತ್ತಿರುವ ಶ್ರೀಮಂತ ಪಾಟೀಲರು.