ಬಡ ರೈತರೊಂದಿಗೆ ತೋಟದಲ್ಲಿ ಮೆಕ್ಕೆಜೋಳದ ತೆನೆ ರುಚಿ ಸವಿದ ಶಾಸಕ ಶ್ರೀಮಂತ
ಕಾಗವಾಡ 28: ರೈತಾಪಿ ಕುಟುಂಬದಲ್ಲಿ ಜನಸಿದ ಅವರ ಪರಂಪರೆಯಂತೆ ಪ್ರಗತಿಪರ ರೈತನಾಗಿ ನಿರಂತರ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಕೃಷಿಕನಾಗಿ ಕೆಲಸ ಮಾಡಿದರು. ಇಗ ಜನರ ಬೆಂಬಲದಿಂದ ಶಾಸಕನಗಿ ಜನಸೇವೆ ಮಾಡುತ್ತಿದ್ದರೂ ಎಲ್ಲಾ ರೈತರು ಜನರೊಂದಿಗೆ ಬೆರೆತು ಮೆಕ್ಕೆಜೋಳದ ತೋಟದಲ್ಲಿ ಕುಳಿತು ರೈತರೊಂದಿಗೆ ಮೆಕ್ಕೆಜೋಳದ ತೆನೆ ಸವಿ ಸವಿಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಿರುವುದು ಅವರ ಸಮಭಾವ ಎದ್ದು ಕಾಣುತ್ತಿದೆ.
ಕಾಗವಾಡ ಮತಕ್ಷೇತ್ರದ ಜಂಬಗ್ಗಿ ಗ್ರಾಮದಲ್ಲಿ ರೈತನ ತೋಟದಲ್ಲಿ ಎಲ್ಲ ಸಾಮಾನ್ಯ ರೈತರೊಂದಿಗೆ ಕುಳಿತುಕೊಂಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತಾ ಇದೇ ಬರಡು ಭೂಮಿಗಳಲ್ಲಿ ನೀರಿಲ್ಲದೆ ಅವ್ಯವಸ್ಥೆಯಾಗಿತ್ತು ಬಳಿಕ ಬ್ಯಾಂಕಗಳಿಂದ ಸಾಲ ಪಡೆಯಲು ಸಕ್ಕರೆ ಕಾರ್ಖಾನೆ ಆಡವಿಟ್ಟು ನೂರಾರು ಕೋಟಿ ಸಾಲ ಪಡೆದು ಇಲ್ಲಿಯ ನೂರಾರು ಏಕರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಯ ನೀರು ಹರಿಸಿದ ಬಳಿಕ ಇಲ್ಲಿಯ ರೈತರು ಕಬ್ಬು, ಮೆಕ್ಕೆಜೋಳ, ದ್ರಾಕ್ಷಿ ಇಂತಹ ಬೆಳೆಗಳು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಮತ್ತೆ ಹಸಿರು ಕ್ರಾಂತಿವಾಗುತ್ತಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಶನಿವಾರ ದಿನ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಬಿಡುವನ್ನು ಮಾಡಿಕೊಂಡು ಇಲ್ಲಿಯ ರೈತನ ತೋಟದಲ್ಲಿ ಹೋಗಿ ಅಲ್ಲಿಯ ಎಲ್ಲ ರೈತರೊಂದಿಗೆ ಕೂಡಿ ಮೆಕ್ಕೆಜೋಳದ ತೆನೆಯ ರುಚಿ ಸವಿದು ನಿಮ್ಮ ಸುಖ ದುಃಖದಲ್ಲಿ ನಾನು ಇದ್ದೇನೆ ಎಂದು ಹೇಳಿದ ಶಾಸಕ ಶ್ರೀಮಂತ ಪಾಟೀಲರು ಹಳ್ಳಿಯ ಬಡ ರೈತರೊಂದಿಗೆ ಒಂದುಗೂಡಿ ಕೆಲ ಕಾಲ ತಾನು ಒಬ್ಬ ರೈತನಾಗಿ ಸುಖ ದುಃಖ ಹಂಚಿಕೊಂಡರು.
ಶಾಸಕರೊಂದಿಗೆ ಅವರ ಪುತ್ರ ಅಥಣಿ ಸಕ್ಕರೆ ಕಾರ್ಖಾನೆ ಎಂ.ಡಿ ಶ್ರೀನಿವಾಸ ಪಾಟೀಲ, ಬಿಜೆಪಿ ಪಕ್ಷದ ಮುಖಂಡರಾದ ಆರ.ಎಂ.ಪಾಟೀಲ್, ಮುರೆಗಪ್ಪಾ ಮಗದುಮ್, ಅಬ್ದುಲ್ ಮುಲ್ಲಾ, ರಾಮ ಸಡ್ಡಿ, ಶಿವಾಜಿ ಸಾತ್ಬುತೆ ,ಅಣ್ಣಾಸಾಹೇಬ್ ಮೀಸಾಳ, ದೀಲೀಪ್ ಪವಾರ್, ರಮೇಶ್ ಅವಳೇಕರ್ ಸೇರಿದಂತೆ ಅನೇಕ ರೈತರು ಶಾಸಕರೊಂದಿಗೆ ಮೆಕ್ಕೆಜೋಳದ ತೆನೆ ರುಚಿ ಸವಿದರು.