ಕಾಗವಾಡ

ಕನಸುಗಳನ್ನು ನನಸು ಮಾಡುತ್ತಿದ್ದಾರೆ ಶಾಸಕ ಶ್ರೀಮಂತ ಪಾಟೀಲ

ಕನಸುಗಳನ್ನು ನನಸು ಮಾಡುತ್ತಿದ್ದಾರೆ ಶಾಸಕ ಶ್ರೀಮಂತ ಪಾಟೀಲ

ಯತೀಶ್ವರಾನಂದ ಸ್ವಾಮೀಜಿ ಹೇಳಿಕೆ: ರಸ್ತೆ ಚರಂಡಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ 

ಶೇಡಬಾಳ 12: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಾರ್ವಜನಿಕರು ಹಲವಾರು ವರ್ಷಗಳಿಂದ ಕಂಡ ಕನಸುಗಳನ್ನು ಶಾಸಕ ಶ್ರೀಮಂತ ಪಾಟೀಲ ನನಸು ಮಾಡುತ್ತಿದ್ದಾರೆಂದು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು. 

ಅವರು ಶನಿವಾರ ದಿ. 12 ರಂದು ಕಾಗವಾಡ ಪಟ್ಟಣದ ಬಸವ ನಗರದ ಸಿದ್ಧೇಶ್ವರ ಕಾಲೋನಿಯಲ್ಲಿ 1 ಕೋಟಿ 35 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. 

ಅವರು ಮುಂದೆ ಮಾತನಾಡುತ್ತಾ ಶ್ರೀಮಂತ ಪಾಟೀಲರು ಶಾಸಕರಾದ ನಂತರ ಕಾಗವಾಡ ಕ್ಷೇತ್ರವು ಎಂದೂ ಕಾಣದಂತಹ ಅಭಿವೃದ್ಧಿಯನ್ನು ಕಾಣುತ್ತಿದೆ. ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದ ಅವರು ಮುಂದಿನ ದಿನಮಾನಗಳಲ್ಲಿಯೂ ಕೂಡ ಅವರ ಜನ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.  

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ನಿಮ್ಮೆಲ್ಲರ ಆಶಿರ್ವಾದದಿಂದ ನಾನು ಶಾಸಕನಾಗಿದ್ದೇನೆ. ನಾನು ಶಾಸಕನಾಗಿದ್ದರೂ ಕೂಡ 24 ಗಂಟೆಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು. ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಂಗವಾಗಿ 1 ಕೋಟಿ 35 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. 

ಇದೇ ಸಮಯದಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನದ ಫಲಾನುಭವಿಗಳಿಗೆ ಶಾಸಕ ಶ್ರೀಮಂತ ಪಾಟೀಲ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು. 

ಕಾಗವಾಡ ಗುರುದೇವಾಶ್ರಮದ ಡಾ. ಯತೀಶ್ವರಾನಂದ ಸ್ವಾಮೀಜಿ, ಸುಭಾಷ್ ಕಠಾರೆ, ವಿಠ್ಠಲ ಪವಾರ, ಆರ್ ಎಮ್ ಪಾಟೀಲ್, ರಾಜು ಕುಸನಾಳೆ, ರವಿ ಪಾಟೀಲ್, ಪ್ರಕಾಶ ಮಿರ್ಜೆ, ಅಪ್ಪಿ ಚೌಗಲೆ, ಕಾಕಾ ಚೌಗಲೆ, ಸಚಿನ ಕವಟಗಿ, ಎಸ್‌.ಓ.ಹಲಸಗಿ, ಬಿ.ಎ.ಪಾಟೀಲ, ಜಿ.ಜಿ.ಕರ್ಲಟ್ಟಿ, ಎಸ್‌.ಎಸ್‌.ಬಾಗನೆ, ತಾತ್ಯಾಂಭಟ್ ಜೋಷಿ, ಪ್ರಕಾಶ ದೊಂಡಾರೆ, ದೀಪಕ ಕಾಂಬ್ಳೆ, ವಿನೋದ ದೇವನೆ, ಶಿಲಾದಾರ ಚೌಹಾನ್, ಬಾಳಾಸಾಬ ಕಾಂಬ್ಳೆ, ಅನೀಲ ಚೌಹಾನ್, ಬಬಲು ಕಾಂಬ್ಳೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಮ್ ಜೆ.ಎ. ಹಿರೇಮಠ, ಸಹಾಯಕ ಇಂಜಿನಿಯರ್ ಮಲ್ಲಿಕಾರ್ಜುನ ಮಗದುಮ್, ಗುತ್ತಿಗೆದಾರ ಎಮ್ ಬಿ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ